
ಮೈಕ್ರೋಸಾಫ್ಟ್ ಅಮೇರಿಕಾ ಮೂಲದ ಪ್ರಸಿದ್ಧ ಮಲ್ಟಿ ನ್ಯಾಷನಲ್ ಕಂಪನಿಯಾಗಿದ್ದು. ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಈ ಹಿಂದೆ 2023ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೈಕ್ರೋಸಾಫ್ಟ್ ಇದೀಗ ಅದಕ್ಕಿಂತ ಬಹು ದೊಡ್ಡ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದೆ.
ಸಾಮಾನ್ಯವಾಗಿ ಉದ್ಯೋಗಿಗಳನ್ನು ಕಡಿತಗೊಳಿಸುವ ಮುನ್ನ ಕಂಪನಿಗಳು ಕೊಡುವ ಕಾರಣವೇ ಆರ್ಥಿಕ ನಷ್ಟ. ಇದೀಗ ಮೈಕ್ರೋಸಾಫ್ಟ್ ಕೂಡ ಆರ್ಥಿಕ ಅಸ್ಥಿರತೆಯಿಂದ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ನೌಕರರ ವಜಾ ಕ್ರಮ ಸಹ ಸೇರಿದೆ.
ಮೈಕ್ರೋಸಾಫ್ಟ್ ಕಂಪನಿಯು ಒಟ್ಟು ಉದ್ಯೋಗಿಗಳಲ್ಲಿ ಶೇ4 ರಷ್ಟು ಅಥವಾ 9,000 ಜನರನ್ನು ವಜಾ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ ಎಂದು ವರದಿಯಾಗಿದೆ. ಇದು ಈ ವರ್ಷದಲ್ಲಿ ದೇಶದಲ್ಲೇ ಅತಿ ದೊಡ್ಡ ಮಟ್ಟದ ಕಡಿತ ಎಂದು ಹೇಳಲಾಗುತ್ತಿದೆ. ಇನ್ನು ಮೈಕ್ರೋಸಾಫ್ಟ್ ಕಂಪನಿಯು ಜೂನ್ 2024ರ ವೇಳೆಗೆ ವಿಶ್ವದಾದ್ಯಂತ ಸುಮಾರು 2,28,000 ಉದ್ಯೋಗಿಗಳನ್ನು ಹೊಂದಿತ್ತು. ಆದರೆ ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ವಜಾಮಾಡಲಾಗಿತ್ತು. ಈ ಬಾರಿ ಮಾರಾಟ ವಿಭಾಗದ ಉದ್ಯೋಗಿಗಳನ್ನು ಕಿತ್ತು ಹಾಕುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.