ಶೃಂಗೇರಿ: ಮರ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್ ಅವರು 15 ದಿನಗಳಿಂದ ಕಛೇರಿಗೆ ಹಾಜರಾಗದೇ ಕಛೇರಿಯ ದೈನಂದಿನ ಕೆಲಸಗಳಿಗೆ ಅಡೆತಡೆ ಮಾಡುತ್ತಿದ್ದು, ಯಾವ ಕೆಲಸವನ್ನೂ ಕಾರ್ಯ ರೂಪಕ್ಕೆ ತರುತ್ತಿಲ್ಲ. ಕಛೇರಿಯ ಹಣಕಾಸಿನ ಬಿಲ್, 15ನೇ ಹಣಕಾಸಿನ ಕಾಮಗಾರಿ ಬಿಲ್, ಕಸದ ಗಾಡಿ ನೌಕರರ ಬಿಲ್, ಕಛೇರಿ ಟ್ಯಾಕ್ಸ್ ಕಟಾವಣೆಯ ಬಿಲ್, ಬೀದಿ ದೀಪ ನಿರ್ವಹಣೆ ಬಿಲ್, ಹೀಗೆ ಇನ್ನೂ ಅನೇಕ ಬಿಲ್ಗಳಿಗೆ ಸಹಿ ಹಾಕದೇ ತಮ್ಮ ಕರ್ತವ್ಯದ ಮೇಲಿರುವ ಆಸಕ್ತಿಯನ್ನು ಕಳೆದುಕೊಂಡಿದ್ದರಿಂದ ತೊಂದರೆ ಉಂಟಾಗುತ್ತಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಬಿಲ್ಗಳಿಗೆ ಇವರ ಬದಲಾಗಿ ತಾಲ್ಲೂಕು ಪಂಚಾಯಿತಿ ಇ.ಒ ಸಹಿ ಹಾಕುತ್ತಿದ್ದು, ಇತ್ತ ಮೆಸ್ಕಾಂನ ಬಿಲ್ಗಳಿಗೂ ಸಹಿ ಹಾಕದೇ ಇರುವ ಕಾರಣ ಅವರು ಮೋಟಾರ್ಗಳ ವಿದ್ಯುತ್ ಅನ್ನು ನಿಲುಗಡೆಗೊಳಿಸಿದ್ದು, ಅನೇಕ ತೊಂದರೆ ಉಂಟಾಗುತ್ತಿದೆ. ಅಲ್ಲದೇ ನವೆಂಬರ್ ತಿಂಗಳ ಮೀಟಿಂಗ್ ಕೂಡ ನಡೆಸಿಲ್ಲ. ಗ್ರಾಮದ ಅಭಿವೃದ್ಧಿಗಾಗಿ ಯೋಚಿಸಬೇಕಾದ ಅಧ್ಯಕ್ಷರು ಮರ್ಕಲ್ ಗ್ರಾಮ ಪಂಚಾಯಿತಿಯನ್ನು ಅರಾಜಕತೆಯತ್ತ ಸಾಗಿಸುತ್ತಿರುವ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ತಾಲ್ಲೂಕು ಪಂಚಾಯಿತಿಯ ಮುಂಭಾಗದಲ್ಲಿ ಪ್ರಶಾಂತ್ ಹಾಗೂ ಇತರ ಸದಸ್ಯರು ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
