
ಮಣಿಪಾಲ್:: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ವಾಹನ ಚಲಾಯಿಸುವಾಗ ಅತಿ ವೇಗವಾಗಿ ಚಲಾಯಿಸುತ್ತಿದ್ದು, ನಿರ್ಲಕ್ಷ್ಯವನ್ನು ವಹಿಸುತ್ತಿದ್ದಾರೆ. ಅಂತೆಯೇ ಕೇರಳದ ಕಣ್ಣೂರಿನ ನಿವಾಸಿಯಾದ ಶೋಹೈಲ್ ನೀಲಾಕತ್ನು ಬೇಕಾಬಿಟ್ಟಿಯಾಗಿ ಕಾರನ್ನು ಚಲಾಯಿಸಿದ್ದು, ಆತನು ಉಡುಪಿಯಿಂದ ಹಿರಿಯಡ್ಕ ಕಡೆಗೆ ಆಕಾಶ ನೀಲಿ ಬಣ್ಣದ ಕಾರನ್ನು ಓಡಿಸಿಕೊಂಡು ಹೋಗಿದ್ದು, ಕರ್ಕಶ ಶಬ್ಧವನ್ನು ಮಾಡಿ ಸರ್ವಾಜನಿಕರಿಗೆ ತೊಂದರೆಯುಂಟುಮಾಡಿದೆ. ಅಕ್ರಮ ವಸ್ತಯಗಳನ್ನು ಸಾಗಿಸುವ ಬಗ್ಗೆ ಅನುಮಾನಗೊಂಡ ಪೋಲಿಸರು ಕಾರನ್ನು ಹಿಂಬಾಲಿಕೊಂಡು ಬಂದ ಪೋಲಿಸರು ಜಂಕ್ಷನ್ ಬಳಿ ತಡೆ ಹಿಡಿದಿದ್ದಾರೆ. ಮಣಿಪಾಲ್ ಪೋಲಿಸರು 12ಎಬಿಹೆಚ್ 59440 ಕಾರನ್ನು ತಮ್ಮ ವಶಕ್ಕೆ ಪಡೆದುಕೊಂಡು ಪರಶೀಲನೆ ನಡೆಸಿದ್ದು, ಚಾಲಕನ ವಿರುದ್ಧ ಮಣಿಪಾಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.