
ಮಂಗಳೂರು: ಗಿರಿಧರ್ ಎಂಬುವವರು ಕೊಡಿಯಾಲಬೈಲಿನ ಬಾಂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ನಿವೃತ್ತರಾಗಿದ್ದರು. ಆ ಬಳಿಕವೂ ಬ್ಯಾಂಕಿಗೆ ಬೇಟಿ ನೀಡುತ್ತಿದ್ದರು. ನಿನ್ನೆಯು ಬ್ಯಾಂಕಿಗೆ ಬಂದಿದ್ದ ಗಿರಿಧರ್ ರವರು ಮನೆಗೆ ಹೋಗದೆ ನಾಪತ್ತೆಯಾಗಿದ್ದ ಕಾರಣ ಅವರ ಪತ್ನಿ ಬಂದರು ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಬ್ಯಾಂಕಿಗೆ ಬಂದಿದ್ದ ಅವರು ಸ್ಟೋರ್ ರೂಮ್ ಕಡೆ ಹೋಗಿದ್ದು ಅಲ್ಲೆ ಕದ್ದುಕೂತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಉಂಟಾಗಿದೆ. ಇಂದು ಬೆಳಗ್ಗೆ ಬ್ಯಾಂಕಿನ ಸಿಬ್ಬಂದಿ ಸ್ಟೋರ್ ರೂಮ್ ಬಾಗಿಲು ತೆಗೆದಾಗ ಅಲ್ಲಿ ನೇಣಿಗೆ ಶರಣಾದ ಗಿರಿಧರ್ ದೇಹ ಪತ್ತೆಯಾಗಿತ್ತು ಎನ್ನಲಾಗಿದೆ. ಘಟನಾ ಸಂಬಂಧ ಬಂದರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.