
ಮಂಗಳೂರು: ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಲಹೆ ನೀಡಿದ್ದು, ವಾಹನದ ನೊಂದಣಿ ಪ್ರಮಾಣ ಪತ್ರ, ಚಾಲನಾ ಪರವಾನಿಗೆ(ಆರ್.ಸಿ) ಹಾಗೂ ಆಧಾರ್ ಕಾರ್ಡ್ ಜೊತೆ ಮೊಬೈಲ್ ಸಂಖ್ಯೆ ಜೋಡಣೆಯನ್ನು ಸರ್ಕಾರವು ಕಡ್ಡಾಯ ಗೊಳಿಸಿದೆ. ನೊಂದಾಯಿತ ವಾಹನಗಳನ್ನು ಅವರ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡುವ ಜೊತೆಗೆ ಅವರ ಆಧಾರ್ ಸಂಖ್ಯೆ ಜೊತೆ ದೃಢೀಕರಣ ಕಡ್ಡಾಯವಾಗಿದೆ. ಯಾವುದೇ ಸಾರಿಗೆ ಅಥವಾ ಚಾಲನಾ ಪರವಾನಗಿ ಸಂಬಂದಿತ ಸೇವೆ ಮಾಹಿತಿಗೆ ಇದು ಅತ್ಯಗತ್ಯ ಎಂದು ಸಚಿವಾಲಯ ಸೂಚಿಸಿದೆ. ಸಂಚಾರ ನಿಯಮ ಉಲ್ಲಂಘನೆ ನೋಟಿಸ್, ಇ-ಚಲನ್, ವಾಹನ ನೊಂದಣೆ, ನವೀಕರಣ, ಡ್ರೈವಿಂಗ್ ಲೈಸೆನ್ಸ್ ನವೀಕರಣ, ಮಾರಾಟ ಸಹಿತ ಎಲ್ಲಾ ಮಾಹಿತಿಯು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಸುಲಭವಾಗಿ ತಲುಪಲು ದೂರವಾಣಿ ಸಂಖ್ಯೆ ಜೊತೆ ಲಿಂಕ್ ಮಾಡಬೇಕಿದೆ. ಸರ್ಕಾರದ ಅಧಿಕೃತ ಪರಿವಾಹನ್ ಮತ್ತು ಸಾರಥಿ ಪೋರ್ಟಲ್ಗೆ ಜನರು ತಮ್ಮ ಮೊಬೈಲ್ ಸಂಖ್ಯೆಯ ವಿವರ ನೊಂದಣಿ ಮಾಡಲು ಭೇಟಿ ನೀಡಬೇಕಿದೆ ಎನ್ನಲಾಗಿದೆ.