
ಮಂಗಳೂರು: ಸುಳ್ಯ ತಾಲ್ಲೂಕಿನಾದ್ಯಂತ ಭಾರಿ ಮಳೆ ಕಾರಣ ಶಾಲೆಗಳಿಗೆ ರಜೆ ನೀಡಲಾಗಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ಮುಂಜಾನೆಯವರೆಗೆ ಭಾರೀ ಮಳೆಯಾಗಿದೆ. ವರುಣನ ಆರ್ಭಟದಿಂದಾಗಿ ಮುಂಜಾಗೃತ ಕ್ರಮವಾಗಿ ಕಲ್ಲಡ್ಕ ಸ.ಹಿ.ಪ್ರಾ. ಶಾಲೆ, ಮಿತ್ತಡ್ಕ ಮರ್ಕಂಜ ಶಾಲೆ, ದೇವರಕಾನ ಶಾಲೆ, ಸ್ನೇಹ ಶಾಲೆ, ಮೈತಡ್ಕ ಶಾಲೆ, ಮಂಡೆಕೋಲು ಶಾಲೆ, ಮುಳ್ಯ ಅಟರೂ ರು ಶಾಲೆ, ಗ್ರೀನ್ ವ್ಯೂ ಶಾಲೆ, ಆಲೆಟ್ಟಿ ಪ್ರೌಢಶಾಲೆ, ಇಡ್ಯಡ್ಕ ಶಾಲೆ, ಸೈಂಟ್ ಜೋಸೆಫ್ ಪ್ರೌಢಶಾಲೆ, ಪೈಂಬೆಚಾಲು ಶಾಲೆ, ಕೊಡಿಯಾಲ ಶಾಲೆ, ಸುಳ್ಯ ಸೈಂಟ್ ಬ್ರಿಜೀಡ್ಸ್ ಹಾಗೂ ಮುಟ್ನೂರ್ ಮರ್ಕಂಜ ಶಾಲೆ ಸೇರಿದಂತೆ ಒಟ್ಟು 16 ಶಾಲೆಗಳಿಗೆ ರಜೆ ನೀಡಲಾಗಿತ್ತು. ಸುಳ್ಯದ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ರಸ್ತೆಗಳಿಗೆ ನೀರು ನುಗ್ಗಿ ವಾಹನ ಸಂಚಾರರು ಪರದಾಡುವಂತಾಗಿದೆ.