
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ. ಯುವಕನೋರ್ವ 1.294ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡಲು ಹೊರಟ ಸಂದರ್ಭದಲ್ಲಿ ಬರ್ಕೆ ಪೋಲಿಸರಿಗೆ ಖಚಿತ ಮಾಹಿತಿ ಬಂದ ಕಾರಣ ನಗರದ ಸುಲ್ತಾನ್ ಬತ್ತೇರಿ ಬಳಿ ಯುವಕನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿಯನ್ನು ಸುನೀಲ್ ಎಂದು ಗುರುತಿಸಲಾಗಿದೆ. ಆರೋಪಿಯು ಬಳಸಿದ ಸ್ಕೂಟರ್, ತೂಕ ಮಾಪನ ಯಂತ್ರ, 500ರೂ ನಗದು ಹಾಗೂ 25ಗ್ರಾಂ ತೂಕದ 3ಪ್ಯಾಕೆಟ್, 431ಗ್ರಾಂ ಮತ್ತು 888 ಗ್ರಾಂ ತೂಕದ ಗಾಂಜಾವನ್ನು ಪ್ಯಾಕೆಟ್ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬರ್ಕೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.