
ಮಂಗಳೂರು: ಶ್ರೀಮಂತ ವ್ಯಕ್ತಿಗಳನ್ನು ಗುರಿಯಲ್ಲಿಟ್ಟುಕೊಂಡು, ತನ್ನ ಬಣ್ಣದ ಮಾತಿನಿಂದ ಅವರನ್ನು ಮರಳು ಮಾಡಿ ಕೊಟ್ಯಾಂತರ ರೂಪಾಯಿಗಳನ್ನು ವಂಚಿಸಿರುವ ಘಟನೆಯು ಬೆಳಕಿಗೆ ಬಂದಿದ್ದು. ಈತನನ್ನು ಮಂಗಳೂರು ನಗರ ಪೋಲಿಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ರೋಷನ್ ಸಲ್ಡಾನ್ಹಾ ಬಂದಿತ ಆರೋಪಿಯಾಗಿದ್ದು. ಜಪ್ಪಿನಮೊಗರು ತಂದೊಳಿಗೆ ಸಮೀಪದ ಐಷಾರಾಮಿ ಮನೆಯೊಂದರಲ್ಲಿ ವಾಸವಿದ್ದ ಎನ್ನಲಾಗಿದೆ ಹಾಗೆಯೇ ಅವನ ಜೊತೆಗಿದ್ದ ಇನ್ನೋರ್ವ ವ್ಯಕ್ತಿಯನ್ನು ಪೋಲಿಸರು ಬಂದಿಸಿದ್ದು, ಮನೆಯಲ್ಲಿ ಮಲೇಶ್ಯಾ ಮೂಲದ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ.
ರೋಷನ್ ಮನೆಯಲ್ಲಿ ಸಿ.ಸಿ ಕ್ಯಾಮರ, ಗೇಟ್ಗೆ ರಿಮೋಟ್ ವ್ಯವಸ್ಥೆ, ಹಲವು ರೀತಿಯ ವ್ಯವಸ್ಥೆಗಳು ಕಂಡು ಬಂದಿದ್ದು. ಮನೆಯ ಬಳಿ ಯಾರೇ ಬಂದರು ಆತನಿಗೆ ತಿಳಿಯುತ್ತಿತ್ತು. ಅವಿತುಕೊಳ್ಳಲು ಅಡಗು ತಾಣವನ್ನು ಆತನ ಮನೆಯಲ್ಲೇ ನಿರ್ಮಿಸಿಕೊಂಡಿದ್ದ. ಶ್ವಾನಗಳನ್ನು ಸಾಕಿಕೊಂಡಿದ್ದಾನೆ.
ಈತನ ವಿರುದ್ಧ ಮಂಗಳೂರು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಶ್ರೀಮಂತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ತಾನು ಶ್ರೀಮಂತ ಎಂಬುವಂತೆ ಬಿಂಬಿಸಿಕೊಂಡು ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಉದ್ಯಮಿಗಳನ್ನು ಪರಿಚಿತರನ್ನಾಗಿಸಿಕೊಂಡು ಬ್ಯಾಂಕ್ ಸಾಲ ಕೊಡಿಸುವುದಾಗಿ ಹಾಗೂ ಕಡಿಮೆ ಮೊತ್ತದಲ್ಲಿ ಜಾಗವನ್ನು ಖರೀದಿಸಿ ಮಾಡಿಸುವುದಾಗಿ ಕೋಟ್ಯಾಂತರ ರೂಪಾಯಿಗಳನ್ನು ವಂಚನೆ ಮಾಡಿದ್ದಾನೆ. ಉದ್ಯಮಿಗಳಿಗೆ ೨೦೦ ಕೋಟಿ ರೂಗಳಿಗೂ ಅಧಿಕ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಪೋಲಿಸರು ದಾಳಿ ನಡೆಸುವ ಸಮಯದಲ್ಲಿ ಆತನು ಮಧ್ಯ ಸೇವಿಸಿದ್ದು, ಮನೆಯಲ್ಲಿದ್ದ ಒಬ್ಬ ವ್ಯಕ್ತಿ ಓಡಿ ಹೋಗಿದ್ದು, ಆತನನ್ನು ಕೂಡ ಪೋಲಿಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೈಬರ್ ಠಾಣಾ ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ, ಪೋಲಿಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ ತಂಡವು ಕಾರ್ಯಾಚರಣೆ ನಡೆಸಿದೆ.