
ಮಲ್ಪೆ: 2011ರಲ್ಲಿ ಮಲ್ಪೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದು ನಡೆದಿದ್ದು, ಆದರೆ ಇದೀಗ ಆ ಕಳ್ಳ ಪೋಲಿಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ಮಂಗಳೂರಿನ ಜಪ್ಪು ಮಾರ್ಕೆಟ್ ನಿವಾಸಿ ಮೊಹಮದ್ ಸಮೀರ್ ಎಂದು ಗುರತಿಸಲಾಗಿದ್ದು. ಹಲವು ವರ್ಷಗಳಿಂದ ಆರೋಪಿಯು ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಪೋಲಿಸರು ಆರೋಪಿಯನ್ನು ಸೆರೆಹಿಡಿದಿದ್ದು, ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಂಗ ಬಂಧನವನ್ನು ನ್ಯಾಯಾಲಯವು ವಿಧಿಸಿದೆ. ಮಂಗಳೂರಿನಲ್ಲಿ ಮಲ್ಪೆ ಪೋಲಿಸ್ ಉಪನಿರೀಕ್ಷಕ ಅನಿಲ್ ಕುಮಾರ್ರವರು ಸಿಬ್ಬಂದಿಗಳಾದ ಸುರೇಶ್, ಕುಬೇರ ಹಾಗೂ ವಿಶ್ವನಾಥ ಅವರೊಂದಿಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಹಿಡಿಯಲಾಗಿದೆ ಎನ್ನಲಾಗಿದೆ.