
ಉಡುಪಿ: ಉಡುಪಿ ಜಿಲ್ಲೆಯ ತೊಟ್ಟಂನ ಸಮುದ್ರದಲ್ಲಿ ಅಲೆಗಳು ಉಕ್ಕುತ್ತಿರುವುದರಿಂದ, ರಭಸಕ್ಕೆ ದೋಣಿ ಪಲ್ಟಿ ಹೊಡೆದಿದ್ದು, ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಈಶ್ವರ ಮಲ್ಪೆ ತಂಡಕ್ಕೆ ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯ ಯೋಗೇಶ್ ಮಾಹಿತಿಯನ್ನು ನೀಡಿದ್ದಾರೆ, ತತಕ್ಷಣ ಸ್ಥಳಕ್ಕೆ ಧಾವಿಸಿ ಸ್ಥಳೀಯರಾದ ಉದಯ್ ಹಾಗೂ ಪ್ರವೀಣ್ ಅವರ ಜೊತೆ ಸೇರಿ ಲೈಫ್ ಜಾಕೇಟ್ ಕೊಟ್ಟು ನಾಲ್ಕು ಜನ ಮೀನುಗಾರರ ಜೀವವನ್ನು ಉಳಿಸಿದ್ದಾರೆ ಎಂದು ಮುಳುಗು ತಜ್ಞರಾದ ಈಶ್ವರ್ ಮಲ್ಪೆ ತಿಳಿಸಿದ್ದಾರೆ ಎನ್ನಲಾಗಿದೆ.
ಮೀನುಗಾರರು ಲೈಫ್ ಜಾಕೆಟ್ ಬಳಸಿಕೊಂಡು ಮೀನುಗಾರಿಕೆ ಇಳಿಯಬೇಕೆಂದು ಈಶ್ವರ್ ಮಲ್ಪೆ ಸಲಹೆಯನ್ನು ನೀಡಿದ್ದಾರೆ. ಹಾಗೆಯೇ ಯಾವ ಸಂದರ್ಭದಲ್ಲಿ ಬೇಕಾದರೂ ಅಲೆಗಳು ಉಕ್ಕಬಹುದಾಗಿದೆ ಆದ್ದರಿಂದ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.