
ಶ್ರೀ ಭಾರತೀ ತೀರ್ಥ ಕಲ್ಚರಲ್ ಟ್ರಸ್ಟ್ ಶೃಂಗೇರಿ ಹಾಗೂ ಗದ್ದೆಮನೆ ವಿಶ್ವನಾಥ್ ಚಾರಿಟೆಬಲ್ ಟ್ರಸ್ಟ್ ಎನ್. ಆರ್. ಪುರ ಆಯೋಜಿಸಿರುವ ಗದ್ದೆಮನೆ ವಿಶ್ವನಾಥ್ ಸಮರ್ಪಿಸುವ, ಹೊದಲ ಹೆಚ್. ಜಿ ಚಂದ್ರಶೇಖರ ಅವರ ಉತ್ಸವಾಧ್ಯಕ್ಷತೆಯಲ್ಲಿ, ರಮೇಶ್ ಬೇಗಾರ್ ಅವರ ‘ಮಲೆನಾಡು ಉತ್ಸವ’ವು ಇಂದು ಮತ್ತು ನಾಳೆ ಶೃಂಗೇರಿಯ ರಾಜಾನಗರ ಕಿಗ್ಗಾ ಸರ್ಕಲ್ ಬಳಿ ಎಂ.ಜಿ ರತ್ನಾಕರ್ ಹೆಗ್ಡೆ ಉಳುವಳ್ಳಿ ಅವರ ಜಾಗದಲ್ಲಿ ನಡೆಯಲಿದೆ. ಇಂದು ಶುಕ್ರವಾರ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಜೀವನಗಾಥೆಯನ್ನು ಸಂಗೀತದ ಮೂಲಕ ಸಾರುವ ವಿನೂತನ ಕಾರ್ಯಕ್ರಮವನ್ನು ಕೊಪ್ಪ ಶ್ರೀನಿಧಿ ತಂಡದವರಿಂದ ನಡೆಯಲಿದೆ. ಹಾಗೆಯೇ ಮಿಮಿಕ್ರಿ ಗೋಪಿಯವರ ವಿಶೇಷ ಅಣುಕು ಕಲೆ ಪ್ರದರ್ಶನ, ನಂತರ ಬೆಂಗಳೂರಿನ ವ್ಯೂಹ ಕಲಾ ತಂಡದ ಭವಾನಿ ವಲ್ಲಭ ಸಂಯೋಜನೆಯ ನವರಸ ರಾಮಾಯಣಂ ನೃತ್ಯ ರೂಪಕ ಜರುಗಲಿದೆ. ನಾಳೆ ನೃತ್ಯ ನಿಕೇತನ ಕೊಡವೂರು ಉಡುಪಿ ತಂಡದಿಂದ ಸುಧೀರ್ ರಾವ್ ಹಾಗೂ ‘ಕಾಂತಾರ’ ಚಿತ್ರದ ಕಮಲ ಖ್ಯಾತಿಯ ಮಾನಸೀ ಸುಧೀರ್ ಅಭಿನಯದಲ್ಲಿ ನಾರಸಿಂಹ ಎಂಬ ನೃತ್ಯ ನಾಟಕ ಮೂಡಿಬರಲಿದೆ ಹಾಗೂ ಸುಜನ್,ಗಣೇಶ್, ಅಕ್ಷಯ್, ರಾಘವೇಂದ್ರ ಮಯ್ಯ ಅವರಿಂದ ಅಮೋಘ ಯಕ್ಷಗಾನ ನಾಟ್ಯ ವೈಭವ ನಡೆಯಲಿದೆ.




