
ಮಹಾರಾಷ್ಟ್ರ: ಈ ಕಾಲದಲ್ಲಿ ಒಂದು ಮದುವೆ ನಡೆಸೋದೇ ಸವಾಲು ಇದ್ದಾಗ, ಮಹಾರಾಷ್ಟ್ರದ ನಾಗ್ಪುರದಲ್ಲಿ ವ್ಯಕ್ತವಾಗಿರುವ ಘಟನೆ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ. ಸಮೀರಾ ಫಾತಿಮಾ ಎಂಬ ಶಿಕ್ಷಕಿ ತನ್ನ ವಿದ್ಯೆಯನ್ನು ದುರುಪಯೋಗ ಮಾಡಿಕೊಂಡು ಕಳೆದ 15 ವರ್ಷಗಳಲ್ಲಿ ಬರೋಬ್ಬರಿ 8 ಗಂಡಸರನ್ನು ಮದುವೆಯಾಗಿದ್ದು, ಇದೀಗ 9ನೇ ಮದುವೆಗೆ ಮುಂದಾಗುತ್ತಿದ್ದಾಗ ಪೊಲೀಸರು ಅವಳನ್ನು ಬಂಧಿಸಿದ್ದಾರೆ. ಈ ‘ಲೂಟೇರಿ ದುಲ್ಹನ್’ ಗಂಡಸರನ್ನು ಮದುವೆಯಾದ ನಂತರ ಬ್ಲಾಕ್ಮೇಲ್ ಮಾಡಿ ಲಕ್ಷಾಂತರ ರೂಪಾಯಿಗಳನ್ನು ನಗದು ಹಾಗೂ ಬ್ಯಾಂಕ್ ಮೂಲಕ ಸುಲಿಗೆ ಮಾಡುತ್ತಿದ್ದಳು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅತ್ಯಂತ ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮೀರಾ ಕೆಲವರಿಂದ 50 ಲಕ್ಷ, ಇನ್ನೊಬ್ಬರಿಂದ 15 ಲಕ್ಷ ರೂಪಾಯಿಗಳವರೆಗೆ ವಂಚಿಸಿದ್ದಾಳೆ. ವಿಶೇಷವಾಗಿ ಶ್ರೀಮಂತ ಹಾಗೂ ವಿವಾಹಿತ ಮುಸ್ಲಿಂ ಪುರುಷರನ್ನು ಗುರಿಯಾಗಿಸಿಕೊಂಡು, ಒಂದು ಗ್ಯಾಂಗ್ನ ಸಹಕಾರದಿಂದ ವಂಚನೆಯ ಜಾಲ ಹಾಸಿದ ಈ ಮಹಿಳೆ, ತೀವ್ರ ತನಿಖೆಯ ಮಧ್ಯೆ ಈಗ ಪೊಲೀಸರ ವಶದಲ್ಲಿದ್ದಾಳೆ.