
ಮಹಾರಾಷ್ಟ್ರ: 2008ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಕೋಮು ಸೂಕ್ಷ್ಮ ಪಟ್ಟಣವಾದ ಮಾಲೇಗಾಂವ್ನಲ್ಲಿ, ಮಸೀದಿಯ ಬಳಿ ನಿಲ್ಲಿಸಲಾಗಿದ್ದ ಸ್ಫೋಟಕ ತುಂಬಿದ ಮೋಟಾರ್ ಸೈಕಲ್ ಬ್ಲಾಸ್ಟ್ನಿಂದ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡ ದಾರುಣ ಘಟನೆಯ ತೀರ್ಪು 17 ವರ್ಷಗಳ ನಂತರ ಇಂದು ಹೊರಬೀಳುತ್ತಿದೆ. ಮುಂಬೈನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಲಿದೆ. ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಪ್ರಕರಣ ತನಿಖೆಯಲ್ಲಿ ಸಾಕ್ಷ್ಯಗಳ ತಾರತಮ್ಯ, ತನಿಖಾ ಸಂಸ್ಥೆಗಳ ಬದಲಾವಣೆ, ಮತ್ತು ರಾಜಕೀಯ ಆಯಾಮಗಳಿಂದ ಈ ಪ್ರಕರಣವು ದೇಶದ ಅತ್ಯಂತ ದೀರ್ಘ ಕಾಲ ಚರ್ಚೆಯಲ್ಲಿದ್ದ ಭಯೋತ್ಪಾದಕ ಪ್ರಕರಣಗಳಲ್ಲಿ ಒಂದಾಗಿ ಪರಿಣಮಿಸಿತ್ತು. ನವರಾತ್ರಿ ಹಬ್ಬದ ಪೂರ್ವದಿನ ಮತ್ತು ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ಈ ಘಟನೆ ಮತ್ತಷ್ಟು ಗಂಭೀರವಾಗಿ ಪರಿಗಣಿಸಲ್ಪಟ್ಟಿತ್ತು.