
ಲಕ್ನೋ: ಉತ್ತರ ಪ್ರದೇಶದ ಗೋರಖಪುರದ ಬಿಚ್ಚಿಯಾ ಪ್ರದೇಶದಲ್ಲಿ ಸುಮಾರು ೬೦೦ ಮಹಿಳಾ ಕಾನ್ ಸ್ಟೆಬಲ್ ಗಳಿಗೆ ಪಿಎಸಿ ತರಬೇತಿ ನೀಡುತ್ತಿದ್ದು, ಸುಮಾರು ೩೬೦ ಮಂದಿ ವಾಸಿಸುವ ಜಾಗದಲ್ಲಿ 600 ಕಾನ್ ಸ್ಟೆಬಲ್ ಗಳು ಇದ್ದು, ತರಬೇತಿ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ, ಫ್ಯಾನ್ ಇಲ್ಲದ ಕೊಠಡಿಗಳು, ಅಷ್ಟೇ ಅಲ್ಲದೆ ಶಿಬಿರದಲ್ಲಿ ಬಾತ್ ರೂಂ ಇಲ್ಲದ ಕಾರಣ ಬಯಲಿನಲ್ಲಿ ಸ್ನಾನ ಮಾಡಲು ಒತ್ತಾಯಿಸುತ್ತಿದ್ದರು ಎಂದು ಮಹಿಳಾ ಸಿಬ್ಬಂದಿಗಳು ತಮ್ಮ ನೋವನ್ನು ಹಂಚಿಕೊಂಡು, ಶಿಬಿರದ ಅಸಹನೀಯ ಪರಸ್ಥಿಯ ವಿರುದ್ಧ ಪ್ರತಿಭಟಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಹಕ್ಕು ಪಾಲಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಿಎಸ್ಸಿ ಕಮಾಂಡರ್ ಆನಂದ್ ಕುಮಾರ್ ಮತ್ತು ಸಿಓ ದೀಪಾಂಶಿ ರಾಥೋಡ್ ಅವರು ಶಿಬಿರಕ್ಕೆ ದಾವಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.