ಚಿಕ್ಕಮಗಳೂರು: ಬೆಟ್ಟದ ಅಂಜನೇಯ ಅದೆಷ್ಟೋ ಭಕ್ತರ ಪಾಲಿನ ಪುಣ್ಯ ಕ್ಷೇತ್ರ. ಇಲ್ಲಿಗೆ ಬಂದರೆ ತಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತೆ ಅನ್ನೋದು ಭಕ್ತರ ನಂಬಿಕೆ. ಪ್ರಧಾನ ಅರ್ಚಕರಾದ ಸೋಮಣ್ಣ ಪ್ರಕಾರ ದೇವಸ್ಥಾನ ಅಭಿವೃದ್ಧಿಯು ಮರೀಚಿಕೆ ಆಗಿಯೇ ಉಳಿದಿದ್ದು, ಅಗತ್ಯ ಮೂಲಸೌಕರ್ಯದ ವಸ್ತುಗಳು, ಆರ್ಚ್, ರಸ್ತೆ, ಮೆಟ್ಟಿಲುಗಳು, ಹಾಗೆಯೇ ದಿನನಿತ್ಯದ ಪೂಜಾ ಸಾಮಗ್ರಿಗಳ ಕೊರತೆ ಎದ್ದು ಕಾಣುತ್ತಿದೆ. ಈ ಬೆಟ್ಟದ ಆಂಜನೇಯನ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ನಿಂತು ಸೇವೆ ಮಾಡೋಣ ಎಂಬುದು ಈ ಸುತ್ತಮುತ್ತಲಿನ ಗ್ರಾಮಸ್ಥರ ಮಾತು ಹಾಗೂ ದಿನನಿತ್ಯದ ಪೂಜೆಗಳಿಗೆ, ವಿಶೇಷ ಪೂಜೆಗಳಿಗೆ ದಾನಿಗಳ ನೆರವು ಬೇಕಾಗಿದೆ.
