
ಹಾವೇರಿ: ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಕುನ್ನೂರ ಶಿವಾನಂದ ಕೊಲೆ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದ್ದು ಈ ಪ್ರಕರಣಕ್ಕೆ ಸಂಭಂದಿಸಿದಂತೆ ಐವರು ಆರೋಪಿಗಳನ್ನು ಇಂದು ಕಾಕಿಪಡೆ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಪೋಲಿಸರ ವಶಕ್ಕೆ ಪಡೆದು ಕರೆತರುವ ಸಮಯದಲ್ಲಿ ಹಾನಗಲ್ಲು ತಾಲ್ಲೂಕು ಕೊಂಡಚ್ಚಿ ಬಳಿ ಪೋಲಿಸರು ಹಾಗೂ ಆರೋಪಿಗಳ ಮದ್ಯ ಗಲಾಟೆ ಶುರುವಾಗಿದ್ದು, ಆರೋಪಿಗಳು ತಪ್ಪಿಸಿಕೊಳ್ಳಲು ಪೋಲಿಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಆಗ ಪ್ರಮುಖ ಆರೋಪಿಗಳಾದ ನಾಗರಾಜ ಸವದತ್ತಿ ಹಾಗೂ ಆಶ್ರಫ್ ಮೇಲೆ ಶಿಗ್ಗಾವಿ ಸಿಪಿಐ ಸತ್ಯಪ್ಪ ಹಾಗೂ ಹಾನಗಲ್ ಪಿಎಸ್ಐ ಸಂಪತ್ ಆನಿಕಿವಿ ಅವರು ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಆರೋಪಿಗಳ ಕಾಲಿಗೆ ತಗುಲಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹುಬ್ಬಳ್ಳಿ ಕಿಮ್ಸ್ಗೆ ಕಳುಹಿಸಲಾಯಿತು.