
ಕುಂದಾಪುರ: ಮನೆಯಲ್ಲಿ ನಿದ್ರಿಸುತ್ತಿದ್ದ ತಾಯಿಗೆ ಯಾವುದೋ ಆಯುಧದಲ್ಲಿ ಹಲ್ಲೆ ಮಾಡಿ ಮನೆಯಿಂದ ಹೊರಗೆ ಕರೆತಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಮಾಡಿದ ನಂತರ ತಾಯಿಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಗೆ ಎಸೆದಿದ್ದಾನೆ ಹಾಗೂ ಪಕ್ಕದ ಮನೆಯ ಸಂಭದಿಕರಾದ ಲೊಲಿಟರವರನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆದು ಬಳಿಕ ಆಕೆಗೂ ಬೆಂಕಿ ಹಚ್ಚಿದ ಮೆಲ್ವಿನ್ ಮೊಂತರೊ(೩೩), ಕೊಲೆ ಯತ್ನದಿಂದ ಗಂಭಿರವಾಗಿ ಸುಟ್ಟ ಗಾಯಗೊಂಡಿರುವ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸಿಸುತ್ತಿದ್ದರು, ಇನ್ನೊಬ್ಬ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ. ಕೊಲೆ ಆರೋಪಿಯಾದ ಮೆಲ್ವಿನ್ ಪ್ರತಿ ದಿನವು ಗಾಂಜಾ ಹಾಗೂ ಮಧ್ಯ ಸೇವಿಸುತ್ತಿದ್ದು, ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ, ತಾಯಿ ಹಾಗೂ ಮಗನ ಮಧ್ಯೆ ಜಗಳವಾಗುತ್ತಿತ್ತು ಎಂದು ನೆರೆಹೊರೆಯ ಮನೆಯವರು ತಿಳಿಸಿದ್ದಾರೆ. ಕೊಲೆ ಆರೋಪಿ ಮೆಲ್ವಿನ್ನ್ನು ಬೈಂದೂರು ಹಾಗೂ ಕೊಲ್ಲೂರು ಠಾಣೆ ಪೋಲಿಸರ ತಂಡ ಇಂದು ಕಾಲ್ತೊಡಿನ ಬ್ಯಾಟ್ಯಾಯಾನಿ ಎಂಬಲ್ಲಿ ಬಂಧಿಸಿದ್ದಾರೆ.