
ಶೃಂಗೇರಿ : ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಕುಕ್ಕುಟ ಸಂಜೀವಿನಿ ಫಲಾನುಭವಿಗಳಿಗೆ 3 ದಿನಗಳ ಸಾಮರ್ಥ್ಯ ಬಲವರ್ಧನೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಸುದೀಪ್ ಸರ್ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಪಶುವೈದ್ಯಾಧಿಕಾರಿಗಳು ಡಾ | ವೆಂಕಟೇಶ್ ಸರ್ ಶೃಂಗೇರಿ ಮತ್ತು ಪಶು ವೈದ್ಯಾಧಿಕಾರಿಗಳು ಡಾ | ಶಮಂತ್ ಕೊಪ್ಪ. ಹಾಗೂ ಶೃಂಗೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷರು ಸುಮಿತ್ರಾ ಸೋಮಶೇಖರ್ ಹಾಗೂ ಕಾರ್ಯದರ್ಶಿ ಆಜ್ಮತ್ ಭಾನು ಮತ್ತು ಖಜಾಂಚಿ ದೇವಮ್ಮ , ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಆದರ್ಶ್, ವಲಯ ಮೇಲ್ವಿಚಾರಕರು ಪ್ರೀತಿಕ್, ಅರ್ಪಿತಾ, ವಲಯ ಮೇಲ್ವಿಚಾರಕರು ಕೌಶಲ್ಯ ಸುಪ್ರಿತಾ ಹೆಗ್ಡೆ, BRP -PRI ಪವಿತ್ರ ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಹಾಜರಿದ್ದರು.




