
ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿರವರು ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ನೂತನ ಚಾಲಕ ಮತ್ತು ನಿರ್ವಾಹಕರಿಗೆ ನಿಯೋಜನಾ ಆದೇಶ ವಿತರಣೆ ಸಮಾರಂಭದಲ್ಲಿ ಆದೇಶ ಪತ್ರವನ್ನು ಕೊಟ್ಟು, ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಕೆಎಸ್ಆರ್ಟಿಸಿ ಯಲ್ಲಿ ಇದು ಬಹುದೊಡ್ಡ ನೇಮಕಾತಿಯಾಗಿದ್ದು, ೮ ವರ್ಷಗಳ ಬಳಿಕ ಈ ಪ್ರಕ್ರಿಯೆಯು ನಡೆದಿದೆ. ಅಭ್ಯರ್ಥಿಗಳನ್ನು ಮೆರಿಟ್ ದೃಷ್ಠಿಕೋನದಲ್ಲಿಟ್ಟುಕೊಂಡು ಆರಿಸಲಾಗಿದೆ ಎಂದು ತಿಳಿಸಿದ್ದಾರೆ. ಹೊಸ ಸಿಬ್ಬಂದಿಗಳು ಸಾರಿಗೆ ಸಂಸ್ಥೆಯನ್ನು ಬೆಳೆಸಿಕೊಂಡು, ಅಪಘಾತ ಆಗದಂತೆ ಹಾಗೂ ವಿದ್ಯಾರ್ಥಿ, ಮಹಿಳಾ ಪ್ರಯಾಣಿಕರೊಂದಿಗೆ ಕರುಣೆಯಿಂದ ವರ್ತಿಸುವಂತೆ ತಿಳಿಸಿದರು
ಕರ್ನಾಟಕ ರಸ್ತೆ ಸಾರಿಗೆ ನಿಗಮದ ಆಧ್ಯಕ್ಷ ಶಾಸಕ ಎಸ್. ಆರ್.ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ರವರು ಹೊಸ ಸಿಬ್ಬಂದಿಗಳಿಗೆ ಶುಭಾಷಯಗಳನ್ನು ತಿಳಿಸಿದ್ದಾರೆ. ಕರ್ತವ್ಯ ನಿಷ್ಠಯಿಂದ ಕಾರ್ಯವನ್ನು ನಿರ್ವಹಿಸಿ, ಆರ್ಥಿಕವಾಗಿ ಸಭಲಗೊಳಿಸಬೇಕೆಂದು ಆಗ್ರಹಿದರು.