
ಕೊಟ್ಟಿಗೆಹಾರ: ಮಲೆನಾಡಲ್ಲಿ ಮುಂದುವರಿದ ಭಾರೀ ಗಾಳಿ-ಮಳೆ ಅಬ್ಬರ. ಒಂದೇ ದಿನಕ್ಕೆ 165 ಮಿ.ಮೀ. ಹತ್ರತ್ರ 7 ಇಂಚು ಮಳೆ ಕಂಡ ಕೊಟ್ಟಿಗೆಹಾರ. ಗಾಳಿ-ಮಳೆಯ ಅಬ್ಬರ ಕಂಡು ಮಲೆನಾಡಿಗರು ಕಂಗಾಲಾಗಿದ್ದು.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿನ ಗಾಳಿ-ಮಳೆಗೆ ಭಯಭೀತರಾದ ಜನ. ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ರಣ ಗಾಳಿ. ಗಾಳಿ ಜೊತೆ ಒಂದೇ ಸಮನೆ ಸುರಿಯುತ್ತಿರೋ ಮಳೆಯಿಂದಾಗಿ, ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರ ಪರದಾಡುವಂತಾಗಿದೆ.
ಅಳಿದುಳಿದ ಕಾಫಿ-ಮೆಣಸು ನೆಲಕಚ್ಚೋ ಆತಂಕದಲ್ಲಿ ಬೆಳೆಗಾರರಿದ್ದಾರೆ. ಮಲೆನಾಡಲ್ಲಿ ಜನವರಿಯಿಂದಲೂ ಆಗಾಗ್ಗೆ ನಿರಂತರವಾಗಿ ಸುರಿಯುತ್ತಿರೋ ಮಳೆ. ಬಿಟ್ಟು-ಬಿಟ್ಟು ಸುರಿಯುತ್ತಿರೋ ಮಳೆಗೆ ಮಲೆನಾಡಿಗರಲ್ಲಿ ಆತಂಕ