
ಕೊಟ್ಟಿಗೆಹಾರ: ಬಣಕಲ್ ಗ್ರಾಮದಲ್ಲಿ ಬಹು ನಿರೀಕ್ಷಿತ ಬಸ್ ತಂಗುದಾಣಕ್ಕೆ ಕೊನೆಗೂ ಚಾಲನೆ ದೊರೆತಿದ್ದು. ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ಸೋಮವಾರ ಉದ್ಘಾಟನೆ ನೆರವೇರಿಸಿದರು.
ಇದರೊಂದಿಗೆ ದಶಕಗಳಿಂದ ರಸ್ತೆ ಬದಿಯಲ್ಲಿ ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಕೆಲಸಗಾರರು ಹಾಗೂ ಪ್ರಯಾಣಿಕರಿಗೆ ನಿರಾಶ್ರಿತ ಸ್ಥಿತಿ ಅಂತ್ಯವಾಯಿತು. ಮಳೆಗಾಲದಲ್ಲಿ ಗಾಳಿ ಮತ್ತು ಮಳೆಯಿಂದ ರಕ್ಷಣೆಗಾಗಿ ಅಂಗಡಿಗಳ ಆಶ್ರಯ ಬೇಕಾಗುತ್ತಿದ್ದ ಸಂದರ್ಭಗಳಿಗೂ ತೆರೆಬಿದ್ದಂತಾಗಿದೆ.
ಶಾಸಕಿ ನಯನ ಮೋಟಮ್ಮ ಮಾತನಾಡಿ, ಗ್ರಾಮದ ಜನತೆ ಹಲವು ವರ್ಷಗಳಿಂದ ತಂಗುದಾಣದ ಅಗತ್ಯವನ್ನು ಮುಂದಿಟ್ಟು ಬಂದಿದ್ದರು. ಈ ಸಂದರ್ಭದಲ್ಲಿ ತಂಗುದಾಣ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು. ಜೊತೆಗೆ ಸಾರ್ವಜನಿಕರು ಸ್ಥಳದ ಸ್ವಚ್ಚತೆ ಕಾಪಾಡುವ ಜವಾಬ್ದಾರಿಯನ್ನು ಹೊಣೆ ಹೊತ್ತುಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಝರಿನ್, ಉಪಾಧ್ಯಕ್ಷೆ ಬಿ.ಬಿ ಲೀಲಾವತಿ, ಪಿಡಿಒ ಕೃಷ್ಣಪ್ಪ, ಪಂಚಾಯಿತಿ ಸದಸ್ಯರಾದ ಅತೀಕ ಬಾನು, ಶಿವರಾಮಶೆಟ್ಟಿ, ಅಜೀದ್, ಸಿದ್ದೀಕ್, ಗೋಪಾಲಾಚಾರ್, ವಿಕ್ರಂ ಗೌಡ, ಸತೀಶ್ ಗೌಡ, ಮೆಲ್ವಿನ್, ಉಮ್ಮಾರ್, ಹೊಸಕೆರೆ ರಮೇಶ್, ಸಬ್ಲಿ ದೇವರಾಜ್, ದೇವಪ್ಪ ಜನ ಪ್ರತಿನಿಧಿಗಳು, ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.