
ಕೋಟ: ಕೋಟ ಠಾಣಾ ಉಪನೀರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಇಸ್ಪೀಟು ಜುಗಾರಿ ಆಟ ಆಡುತ್ತಿರವ ಖಚಿತ ಮಾಹಿತಿ ಮೇರೆಗೆ ಬಹ್ಮಾವರ ತಾಲ್ಲೂಕಿನ ಚಿತ್ರಪಾಡಿ ಗ್ರಾಮದ ಸಾಲಿಗ್ರಾಮದಲ್ಲಿರುವ ಗುರು ನರಸಿಂಹ ದೇವಸ್ಥಾನದ ಕೆರೆಯ ಬಳಿ ಇರುವ ಮನೆಯ ಹತ್ತಿರ ಸಿಬ್ಬಂದಿಗಳೊಂದಿಗೆ ತಡರಾತ್ರಿ ೧ ಗಂಟೆ ಸುಮಾರಿಗೆ ದಾಳಿ ನಡೆಸಿ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅದಲ್ಲದೇ ಆಟಕ್ಕೆ ಬಳಸಿದ ಎಲೆಗಳನ್ನು, ೧೪೧೩೦ ರೂ ನಗದು, ಬೆಡ್ಶೀಟ್, ಏಳು ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸತೀಶ, ರಘು ಸಾಲಿಗ್ರಾಮ, ಹರೀಶ, ಚೇತನ ಕಾರ್ಕಡ, ಸನ್ನಿಧಾನ, ಪ್ರಸಾದ, ನವೀನ ಹಾಗೂ ಜನಾರ್ಧನ ಬಾರ್ಕೂರು ಇಸ್ಬೀಟು ಆಡುತ್ತಿದ್ದವರು ಎಂದು ತಿಳಿದು ಬಂದಿದೆ. ಅಪರಾಧ ಕ್ರಮಾಂಕ ೧೫೭/೨೦೨೫ ಕಲಂ:೮೭ಕೆಪಿ ಆಕ್ಟ್ ರಂತೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.