
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೀಗಾ ಗ್ರಾಮದಲ್ಲಿ ವರುಣನ ಆರ್ಭಟದಿಂದಾಗಿ ಮನೆಯ ಹಿಂಭಾಗದಲ್ಲಿದ್ದ ಧರೆ ಕುಸಿದಿರುವ ಘಟನೆ ನಡೆದಿದೆ. ಧರೆ ಕುಸಿದಿರುವ ಪರಿಣಾಮ ಗೋಡೆ ಹಾಗೂ ಕೊಟ್ಟಿಗೆ ಹಾನಿಯಾಗಿದೆ. ಕುಸಿದಿರುವ ಕೊಟ್ಟಿಗೆ ಹಾಗೂ ಮನೆಯ ಗೋಡೆ ಹರೀಶ್ ಭಟ್ ಎಂಬುವರಿಗೆ ಸಂಬಂಧಪಟ್ಟಿದ್ದಾಗಿದೆ. ಘಟನಾ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.