
ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಮಲಗಾರು ಗ್ರಾಮದ ೮ನೇ ತರಗತಿ ಸಿಂಧೂರ ಎಂಬ ವಿದ್ಯಾರ್ಥಿನಿಯು ಶಾಲೆಗೆ ದಿನನಿತ್ಯವೂ 3-4 ಕಿ.ಲೋ ಮೀಟರ್ ನಡೆಯುತ್ತಿದ್ದು ಇದೀಗ ಪ್ರಧಾನಿ ಮೋದಿಯವರಿಗೆ ತಮ್ಮೂರ ರಸ್ತೆ ದುರಸ್ತಿಯ ಕುರಿತು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪತ್ರ ಬರೆದಿದ್ದು, ಗ್ರಾಮದಲ್ಲಿ ಅಷ್ಟೇ ಅಲ್ಲದೆ ಜಿಲ್ಲೆಯಲ್ಲೇ ಸದ್ದು ಮಾಡುತ್ತಿದೆ.
ಮಳೆ ಬಂದರೆ ಓಡಾಡುವುದೇ ದುಸ್ತರವಾಗುತ್ತದೆ ಎಂದು ಆರೋಪಿಸಿರುವ ಸಿಂಧೂರ ತಮ್ಮ ಪತ್ರದಲ್ಲಿ ಹೀಗೆ ಹೇಳಿದ್ದಾರೆ. ” ನಮ್ಮ ಊರಿಗೆ ಒಂದು ಉತ್ತಮ ರಸ್ತೆ ಬೇಕಾಗಿದೆ. ಶಾಲೆಗೆ ಹೋಗುವ ಬದಿಯಲ್ಲಿ ಬೇರೆ ದಾರಿಯೇ ಇಲ್ಲ. ವಾರದಲ್ಲಿ 3-4 ದಿನ ಶಾಲೆಗೆ ಹೋಗಲು ಸಾಧ್ಯವಿಲ್ಲ. ಮಕ್ಕಳು, ಮಹಿಳೆಯರು ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮ ರಸ್ತೆಯನ್ನು ದುರಸ್ತಿ ಮಾಡಿಸಿ” ಎಂದು ಮನವಿ ಸಲ್ಲಿಸಿದ್ದಾಳೆ.
ಈ ಭಾಗದ ರಸ್ತೆ ಶಾಲೆಗಷ್ಟೇ ಅಲ್ಲದೆ, ದಿನನಿತ್ಯದ ಆರೋಗ್ಯ ಸೇವೆ, ತುರ್ತು ಸಂದರ್ಭಗಳಿಗೂ ಪ್ರಮುಖ ದಾರಿಯಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.