
ಕೊಪ್ಪ: ಬೆಂಗಳೂರಿನ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದ ೧೭ ಜನ ಸ್ನೇಹಿತರು ತಮ್ಮ ವಾರಾಮತ್ಯದ ರಜೆಯಲ್ಲಿ ಸುತ್ತಾಡಲು ಬೆಂಗಳೂರಿನಿಂದ ಆಗುಂಬೆ ಕಡೆಗೆ ಬಂದಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ಕೊಪ್ಪದಿಂದ ಸೀಗೋಡು ಬರುವಾಗ ಚಾಲಕ ನಿದ್ದೆಗೆ ಜಾರಿದ್ದು ಪರಿಣಾಮ ನಿಯಂತ್ರಣ ಕಳೆದುಕೊಂಡ ಪ್ರವಾಸಿ ಬಸ್ ರಸ್ತೆ ಬದಿಗೆ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರಿಗೆ ಗಾಯಗಳಾಗಿದ್ದು ಅವರನ್ನು ಕಾರ್ತಿಕ್, ಮಧು, ಚೈತ್ರ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯು ಇಂದು ಮುಂಜಾನೆ ಸಂಭವಿಸಿದೆ.