ಕೊಪ್ಪ: ಪ್ರತಿಯೊಬ್ಬರೂ ನಮ್ಮಲ್ಲಿರುವ ನಕಾರಾತ್ಮಕ ಅಂಶಗಳನ್ನು ನಾಶಮಾಡಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕೊಪ್ಪ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಹುಲುಮಕ್ಕಿ ಹೆಚ್ ಎಸ್ ಚಂದ್ರಕಲಾ ತಿಳಿಸಿದರು ಕುವೆಂಪುರವರು ತಮ್ಮ ರಾಮಾಯಣ ದರ್ಶನಂ ಕೃತಿಯಲ್ಲಿ ನಕಾರಾತ್ಮಕ ಮಂಥರೆ ಯಂತಹ ಪಾತ್ರಗಳನ್ನು ಸಾಕಾರಾತ್ಮಕವಾಗಿ ಚಿತ್ರಿಸಿದ್ದಾರೆ ಯಾವುದೇ ಕೆಲಸ ನಿರ್ವಹಿಸುವಾಗ ಪ್ರಜ್ಞಾವಂತಿಕೆ ಮತ್ತು ತನ್ಮಯತೆ ಯನ್ನು ಪ್ರದರ್ಶಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು ಅವರು ಶೃಂಗೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು ಡಾ ಹುಲಸೆ ಮಂಜಪ್ಪ ಗೌಡ ರವರು ತಮ್ಮ ತಂದೆ ಹುಲಸೆ ಬೋಬಯ್ಯಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ತಾ ಕ ಸಾ ಪ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಅಧ್ಯಕ್ಷತೆಯಲ್ಲಿ ನಡೆದು ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಭಾರತೀ ಉದ್ಘಾಟಿಸಿದರು ಕ ಸಾ ಪ ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಸುಮಂಗಲ ಆನಂದಸ್ವಾಮಿ, ಕಸಬಾ ಹೋಬಳಿ ಘಟಕ ಅಧ್ಯಕ್ಷರಾದ ಅಂಗುರುಡಿ ದಿನೇಶ್, ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಚಾಣಕ್ಯರಾಜ್ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು ಕಾಲೇಜಿನ ಕನ್ನಡ ಸಂಘದಿಂದ ಕಾರ್ಯಕ್ರಮವನ್ನು ವಿಶೇಷವಾಗಿ ಸಂಯೋಜಿಸದ್ದು ಭಾಗವಹಿಸಿದ ಕನ್ನಡ ಸುಮನಸ್ಸುಗಳಿಗೆ ಮುದ ನೀಡುವ ವಿಷಯವಾಗಿತ್ತು.
