
ಗೋಣಿಕೊಪ್ಪಲು: ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗು. ಭತ್ತ, ಕಾಫಿ, ಕಾಳು ಮೆಣಸು ಇಲ್ಲಿನ ಪ್ರಮುಖ ಬೆಳೆಗಳು. ಶೇ80 ರಷ್ಟು ಜನರು ಕೃಷಿಕರಾಗಿದ್ದಾರೆ. ಕೊಡಗಿನ ಗದ್ದೆಗಳು ಈ ಮೊದಲು ಭತ್ತದ ಪೈರಿನಿಂದ ಹಸಿರಾಗಿ ಕಂಗೊಳಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿಗೆ ಯಾಂತ್ರೀಕರಣದಿಂದ ಸ್ವಲ್ಪ ಮಟ್ಟಿಗೆ ಕೂಲಿ ಕೆಲಸದವರ ಬವಣೆ ಕಡಿಮೆಯಾಗಿದೆ. ಆದರೆ ಇದೀಗ ರೈತರಿಗೆ ಸಂಕಷ್ಟವಾಗಿ ಕಾಡುಪ್ರಾಣಿಗಳ ಉಪಟಳವು ಕಾಡುತ್ತಿದ್ದು. ಕಾಡು ಹಂದಿ, ಆನೆ, ಕಾಡೆಮ್ಮೆ, ಜಿಂಕೆಗಳ ಭತ್ತದ ಕೃಷಿಗೆ ಸಂಕಷ್ಟವಾಗಿ ಕಾಡುತ್ತಿದೆ.