
ಕಿಗ್ಗಾ: ಮಳೆ ದೇವರೆಂದೇ ಹೆಸರಾದ ಕಿಗ್ಗ ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿ ದೇವರ ಕುಡಿತೇರು ಪ್ರತಿವರ್ಷದಂತೆ ಧನು ಮಾಸದ ಎರಡನೆಯ ದಿನವಾದ ಇಂದು ಸಂಪನ್ನವಾಯ್ತು. ದೇವಾಲಯದ ಆಡಳಿತಾಧಿಕಾರಿಗಳು ಹಾಗು ತಹಶೀಲ್ದಾರರಾದ ಅನುಪ್ ಸಂಜೋಗ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ತಾಂತ್ರಿಗಳಾದ ವಿಶ್ವನಾಥ ಭಟ್ ಅರ್ಚಕರಾದ ಶಿವರಾಮಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ರಥಬೀದಿಯಲ್ಲಿ ಭಕ್ತಾದಿಗಳು ರಥವನ್ನು ಎಳೆದರು. ಅರ್ಚಕ ವಿಶ್ವನಾಥಭಟ್ ಕಾರ್ಯ ನಿರ್ವಾಹಕ ಅಧಿಕಾರಿ . ಕಂದಾಯ ಮುಜರಾಯಿ ರಕ್ಷಣಾ ಇಲಾಖಾ ಅಧಿಕಾರಿ ಸಿಬ್ಬಂದಿಗಳು ಶಾನುಭೋಗರು ಹಾಗು ಸಿಬ್ಬಂದಿಗಳು ಹಿಂದಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಸದಸ್ಯರು ಊರಿನ ಪ್ರಮುಖರು ಪರ ಊರಿನವರು ಸಹ ಪಾಲ್ಗೊಂಡರು.