
ಶಿಗ್ಗಾವಿ: ತಾಲ್ಲೂಕಿನ ಮುಗಳಿ ಗ್ರಾಮದ ನೇತ್ರಾವತಿ ಹಾಗೂ ಪ್ರಶಾಂತ ದುಂಡಪ್ಪನವರ ದಂಪತಿಗೆ ಫೆಬ್ರವರಿ 28 ರಂದು ಜನಿಸಿದ ಮಗು ಪ್ರವತಿ ದುಂಡಪ್ಪ. ತಾಯಿಯೊಂದಿಗೆ ಓಂಕಾರ ಜಪಿಸುವುದರ ಮೂಲಕ ಗಮನ ಸೆಳೆದಿದೆ. ಓಂಕಾರ ಜಪಿಸುವುದನ್ನು ಗಮನಿಸಿದ ಪೋಷಕರು ಮಗು ಓಂಕಾರ ಜಪಿಸುವ ವೀಡಿಯೋ ಮಾಡಿ ಏಪ್ರೀಲ್ 13ರಂದು ಕಿಡ್ಸ್ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸಿಕೊಟ್ಟಿದ್ದರು. ಮೇ 10 ರಂದು ಕಿಡ್ಸ್ ಗ್ರೂಪ್ ಆಫ್ ರೆಕಾರ್ಡ್ ದೆಹಲಿ ಸದಸ್ಯರು ” ಓಂ ಜಪಿಸಿದ ಅತ್ಯಂತ ಕಿರಿಯ ಮಗು ಎಂಬ ವಿಶ್ವದಾಖಲೆಯ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.