
ಬೆಂಗಳೂರು: ರಾಯಚೂರು ಮೂಲದ ಸಿದ್ದಪ್ಪ ಹಾಗೂ ವೀರಮ್ಮ ದಂಪತಿಯವರು ನಗರದ ವಿಶ್ವೇಶ್ವರಯ್ಯ ಲೇಔಟಿನಲ್ಲಿ ವಾಸವಾಗಿದ್ದು. ಇವರ ೫ ವರ್ಷದ ಮಗು ಜೂನ್ ೨೧ರಂದು ನಾಪತ್ತೆಯಾಗಿತ್ತು. ಸುತ್ತ-ಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದರು ಮುಗು ಪತ್ತೆಯಾಗದ ಕಾರಣ ಪೋಷಕರು ಪೋಲಿಸ್ ಠಾಣೆಗೆ ದೂರು ನಿಡಿದ್ದಾರೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಡಿ ನೀಡಿ ಪರಿಶೀಲನೆ ನಡೆಸಿದರು, ಆದರೆ ಅಂದು ಬೆಸ್ಕಾಂ ಕಾಮಗಾರಿ ನಡೆಯುತ್ತಿರುವ ಕಾರಣ ವಿದ್ಯುತ್ ಕಡಿತ ಪರಿಣಾಮವಾಗಿ ಕ್ಯಾಮರಗಳು ಚಾಲ್ತಿಯಲ್ಲಿರಲಿಲ್ಲ. ಮನೆಯ ಬಳಿ ಮಗುವಿನ ವಸ್ತ್ರ ಪತ್ತೆಯಾಗಿದೆ. ಬಳಿಕ ಪೋಲಿಸರು ಶ್ವಾನದಳದ ಸಹಾಯದಿಂದ ಪತ್ತೆ ಕಾರ್ಯ ಶುರುಮಾಡಿದ್ದಾರೆ. ಶ್ವಾನವು ಮಗುವಿನ ಬಟ್ಟೆಯ ವಾಸನೆಯನ್ನು ಹಿಡಿದು ಮಗು ನಾಪತ್ತೆಯಾದ ಸ್ಥಳದಿಂದ ಅರ್ಧ ಕಿ.ಮೀ ದೂರದ ಬಸಮ್ಮನ ಮನೆಗೆ ಕರೆದುಕೊಂಡು ಹೋಯಿತು. ರಾಯಚೂರು ಮೂಲದ ಬಸಮ್ಮಳನ್ನು ಪೋಲಿರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಮಗುವನ್ನು ಅಪಹರಿಸಿದ ಬಗ್ಗೆ ತಿಳಿಸಿ, ಮಗುವನ್ನು ಕರೆದುಕೊಂಡ ಹೋದ ರಾಯಚೂರು ವ್ಯಕ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಪೋಲಿಸರು ಮಗುವನ್ನು ಸುರಕ್ಷಿತವಾಗಿ ಕರೆತರುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.