
ಬೆಂಗಳೂರು: 516ನೇ ನಾಡಪ್ರಭು ಕೆಂಪೇಗೌಡ ಜಂಯಂತೋತ್ಸವವನ್ನು ವೈಭವಪೂರ್ವಕವಾಗಿ ಆಚರಿಸಲಾಗುತ್ತಿದ್ದು. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿತರಿಸಲು ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ೫೩ ಜನರಿಗೆ ನೀಡಲಾಗುವುದು.ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರು ಇಂದು ಸಂಜೆ ೬ ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿಯ ಡಾ.ರಾಜ್ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
೫೧೬ ನೇ ನಾಡಪ್ರಭು ಕೆಂಪೇಗೌಡ ಜಯಂತೋತ್ಸವದ ಪ್ರಶಸ್ತಿ ಪಡೆಯುವವರು ಬಿ.ಎಸ್ ಪಾಟೀಲ್(ಸಾರ್ವಜನಿಕ ಸೇವೆ), ವಿ. ರವಿಚಂದರ್(ಸಮಾಜ ಸೇವೆ), ನಂದ ಕುಮಾರ್ (ವಾಯು ನೆಲೆ), ಆರ್.ಕೆ ಮಿಶ್ರಾ(ವಾಸ್ತು ಶಿಲ್ಪಿ), ಸಂಗೀತ ಕಟ್ಟಿ (ಸಂಗೀತ), ಮಹೇಶ್ ಭೂಪತಿ (ಕ್ರೀಡೆ) ಸೇರಿದಂತೆ ಒಟ್ಟು ೫೩ ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.