
Sringeri ಇಂದು ಕಾರ್ತಿಕ ಸೋಮವಾರ ಶಿವನನ್ನು ಭಕ್ತಿಯಿಂದ ಪೂಜಿಸಲು ಶುಭ ದಿನ. ಇಂದು ಎಲ್ಲೆಡೆ ಶಿವಾರಾಧಕರು ಪರಮೇಶ್ವರನನ್ನು ಭಕ್ತಿಯಿಂದ ಸ್ತುತಿಸುತ್ತಾರೆ. ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತದೆ, ಅಂತೆಯೇ ಪ್ರತೀ ಕಾರ್ತೀಕ ಸೋಮವಾರದಂದು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಗುರುನಿವಾಸದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರಿಂದ ಶ್ರೀ ಚಂದ್ರಮೌಳೀಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಅಂತೆಯೇ ಇಂದೂ ಸಹ ಕಾರ್ತಿಕ ಸೋಮವಾರ ಪೂಜಾ ನಿಮಿತ್ತ ಮಹಾಸನ್ನಿಧಾನಂಗಳವರು ವಿಶೇಷ ಪೂಜೆಯನ್ನು ನೆರವೇರಿಸಿದರು. ಇದರ ನೇರಪ್ರಸಾರವನ್ನು (jaitv) ಜೈಟಿವಿ ಚಾನೆಲ್ ನಲ್ಲಿ ಭಿತ್ತರಿಸಲಾಗಿದ್ದು, ಭಕ್ತರು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಈ ಲಿಂಕ್ ಬಳಸಿ ನೇರಪ್ರಸಾರ ವೀಕ್ಷಿಸಿಬಹುದಾಗಿದೆ. https://www.youtube.com/live/tVoNBDSe85Y?si=qk0o3dipXyJgbNz-
ಈ ಕಾರ್ತೀಕ ಸೋಮವಾರದ ಪೂಜೆ ಹಿಂದೆ ಒಂದು ದಂತ ಕಥೆಯೂ ಇದೆ ಅದೇನೆಂದರೆ ಚಂದ್ರ ದೇವನು ತನ್ನ 27 ಹೆಂಡತಿಯರನ್ನು ಸಮಾನವಾಗಿ ನೋಡದೆ ಭೇದಭಾವ ಮಾಡುತ್ತಿದ್ದನು, ಒಬ್ಬರಿಗೆ ಪ್ರೀತಿ, ಇನ್ನೊಬ್ಬರಿಗೆ ಮಾತ್ಸರ್ಯವನ್ನು ತೋರಿಸುತ್ತಿದ್ದನು, ಇದರಿಂದ ಕೋಪಗೊಂಡ ದಕ್ಷ ಮಹಾರಾಜನು ಚಂದ್ರನಿಗೆ ಕ್ಷೀಣಿಸುವ ಮತ್ತು ಕಳೆಗುಂದುವ ಶಾಪವನ್ನಿತ್ತನು.ದಕ್ಷನ ಶಾಪದಿಂದಾಗಿ ದಿನಕಳೆದಂತೆ ಚಂದ್ರನ ಶಕ್ತಿಗಳು ಮತ್ತು ಹೊಳಪು ಮಸುಕಾಗಲು ಪ್ರಾರಂಭಿಸಿತು. ಅವನು ಕ್ಷೀಣಿಸುವ ಕೊನೆಯ ಹಂತದಲ್ಲಿದ್ದಾಗ, ತನ್ನನ್ನು ರಕ್ಷಿಸುವಂತೆ ಶಿವನನ್ನು ತೀವ್ರವಾಗಿ ಪ್ರಾರ್ಥಿಸಿದನು. ಅವನ ಪ್ರಾರ್ಥನೆಯಿಂದ ಸಂತಸಗೊಂಡ ಶಿವನು ಅವನನ್ನು ಶಾಪದಿಂದ ಮುಕ್ತಗೊಳಿಸಿ ಅರ್ಧಚಂದ್ರಾಕೃತಿಯಂತೆ ಅವನ ತಲೆಯ ಮೇಲೆ ಇಟ್ಟನು. ಅಂದಿನಿಂದ ಶಿವನನ್ನು “ಚಂದ್ರಮೌಳೀಶ್ವರ” ಅಥವಾ “ಸೋಮೇಶ್ವರ” ಎಂದು ಕರೆಯುತ್ತಾರೆ. ಕಾರ್ತಿಕ ತಿಂಗಳ ಸೋಮವಾರದಂದು ಶಿವನು ಚಂದ್ರನಿಗೆ ಈ ವರವನ್ನು ಆಶೀರ್ವದಿಸಿದ್ದಾನೆ ಎನ್ನುವ ನಂಬಿಕೆಯಿದೆ. ಆದ್ದರಿಂದ, ಕಾರ್ತಿಕ ತಿಂಗಳ ಸೋಮವಾರಗಳು ಶಿವನನ್ನು ಆರಾಧಿಸಲು ಮತ್ತು ಆಶೀರ್ವಾದ ಪಡೆಯಲು ಸೂಕ್ತ ಎಂದು ನಂಬಲಾಗುತ್ತದೆ.