
ಶೃಂಗೇರಿ: ಹಿಂದೂ ಧರ್ಮದಲ್ಲಿ ಸೋಮವಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ದಿನವು ಶಿವನಿಗೆ ಬಹಳ ಪ್ರಿಯವಾದ ದಿನವಾಗಿದೆ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಭಕ್ತರ ಎಲ್ಲಾ ತೊಂದರೆಗಳು ಶೀಘ್ರದಲ್ಲೇ ದೂರವಾಗುತ್ತವೆ ಎಂದು ನಂಬಲಾಗಿದೆ. ಶ್ರಾವಣ ಸೋಮವಾರದಂತೆಯೇ ಕಾರ್ತಿಕ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು ಇಂದಿನಿಂದ ಕಾರ್ತಿಕ ಮಾಸ ಆರಂಭವಾಗಿದ್ದು, ಕಾರ್ತಿಕ ಸೋಮವಾರದ ಮೊದಲ ದಿನವಾದ ಇಂದು ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳವರ ಅಮೃತ ಹಸ್ತದಿಂದ ಚಂದ್ರಮೌಳೀಶ್ವರ ಪೂಜೆ ನಡೆಯಿತು. ಕಾರ್ತಿಕ ಮಾಸದಲ್ಲಿ ಮಾಡುವ ತೀರ್ಥ ಸ್ನಾನ, ಪೂಜೆ, ದೀಪ ದಾನ ವಿಶೇಷ ಫಲ ನೀಡುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಶಿವ ನಾಮಸ್ಮರಣೆ ಮತ್ತು ಪೂಜೆ ಅತ್ಯಂತ ಫಲಪ್ರದ.