
ಕಾರ್ಕಳ: ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮ ಪರಪ್ಪಾಡಿಯಲ್ಲಿ ಪತ್ನಿಯೋರ್ವಳು ಪತಿಗೆ ಕುಡಿದು ಬಂದ ಕಾರಣ ಕತ್ತಿಯಿಂದ ಹಲ್ಲೆ ಮಾಡಿದ್ದಾಳೆ. ಬಳಿಕ ಪತ್ನಿಯೇ ಪೋಲಿಸರ ಬಳಿ ಯಾರೋ ಅಪರಿಚತರು ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾಳೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಶೇಖರ್ ಮೂಲ್ಯ ಎಂದು ತಿಳಿದು ಬಂದಿದೆ. ಹಲ್ಲೆ ಎಸಗಿರುವ ಯುವತಿಯನ್ನು ಮಾಲತಿ ಎಂದು ಗುರುತಿಸಲಾಗಿದೆ. ಪೋಲಿಸರು ಸೂಕ್ತ ವಿಚಾರಣೆ ಕೈಗೊಂಡ ವೇಳೆಯಲ್ಲಿ ಮಾಲತಿ ತಾನೆ ಗಂಡ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಾರಣ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಕ್ಕ-ಪಕ್ಕದ ಗ್ರಾಮಸ್ಥರಿಂದಲೂ ವಿಚಾರಿಸಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಮಾಲತಿಯನ್ನು ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶೇಖರ್ ಹಾಗೂ ಮಾಲತಿ ಹಳೆಯ ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದು, 2011ರಲ್ಲಿ ಪಕ್ಕದ ಮನೆಯ ರಾಮಣ್ಣ ಕುಲಾಲ್ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ್ದು, 2021ರಲ್ಲಿ ಬಿಡುಗಡೆ ಹೊಂದಿದ್ದರು ಎನ್ನಲಾಗಿದೆ. ಮಾಲತಿ ತಮ್ಮ ಮಗಳಿಗೆ ಕರೆ ಮಾಡಿ ನಿನ್ನ ತಂದೆಗೆ ಯಾರೋ ಅಪರಿಚತರು ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಇದರಿಂದಾಗಿ ಮೃತ ಪಟ್ಟಿದ್ದಾರೆ ಎಂದು ತಿಳಿಸಿದ್ದಾಳೆ. ಅದೇ ಕ್ಷಣ ಆಂಬುಲೆನ್ಸ್ಗೆ ಕರೆಸಿ, ಹಲ್ಲೆಗೊಳಗಾದ ಪತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.