
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ 2018ರ ನವೆಂಬರ್ 24ರಂದು ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 30 ಮಂದಿ ದುರ್ಮರಣ ಹೊಂದಿದ್ದರು. ಮೃತರಲ್ಲಿ ಹೆಚ್ಚಿನವರು ಮಕ್ಕಳು. ಕೆಎ–19, ಎ–5676 ನಂಬರ್ನ ಖಾಸಗಿ ಬಸ್ ಪಾಂಡವಪುರದಿಂದ ಕನಗನಮರಡಿ–ವದೇಸಮುದ್ರ–ಶಿವಳ್ಳಿ ಮಾರ್ಗವಾಗಿ ಮಂಡ್ಯ ಕಡೆಗೆ ಹೊರಟಿತ್ತು. ರಸ್ತೆ ತುಂಬಾ ಕಿರಿದು, ಗುಂಡಿಗಳಿಂದ ಹಾಳಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಮೊದಲಿಗೆ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ವಿಶ್ವೇಶ್ವರಯ್ಯ ನಾಲೆಗೆ ಉರುಳಿತು. ಈ ಸ್ಥಳದಲ್ಲಿ ಇದಕ್ಕೂ ಮುಂಚೆ ಕಾರು ಅಪಘಾತವಾಗಿತ್ತು.
ಅಪಘಾತದ ನಂತರ ಮೃತ ಮಕ್ಕಳ ಶವಪರೀಕ್ಷೆ ಕಾಲುವೆಯ ಪಕ್ಕದಲ್ಲೇ ನಡೆಸಲಾಯಿತು. ಬಳಿಕ ಬಸ್ಸ ನ್ನು ಪಾಂಡವಪುರ ಪೊಲೀಸ್ ಠಾಣೆ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಲಾಯಿತು. ಕೆಲವು ದಿನಗಳ ಬಳಿಕ ಅಲ್ಲಿನ ಮನೆಗಳಲ್ಲಿ ವಾಸಿಸುತ್ತಿದ್ದವರು, ರಾತ್ರಿ ವೇಳೆ ಬಸ್ ಸುತ್ತಮುತ್ತ ಚೀರಾಟ ಮತ್ತು ಕಿರುಚಾಟಗಳ ಶಬ್ದಗಳು ಕೇಳಿಸುತ್ತಿವೆ ಎಂದು ಪೊಲೀಸರಿಗೆ ತಿಳಿಸಿದರು. ಇದರಿಂದ ಆತಂಕಗೊಂಡ ಪೊಲೀಸರು, ಅತೀಂದ್ರಿಯ ಘಟನೆಗಳ ತಜ್ಞ ಮತ್ತು ಅಧಿಮನೋವಿಜ್ಞಾನಿ ಡಾ. ರಾಹುಲ್ ಕುಮಾರ್ ಅವರನ್ನು ತನಿಖೆಗೆ ಆಹ್ವಾನಿಸಿದರು.
ಡಾ. ರಾಹುಲ್ ಕುಮಾರ್ ಹಾಗೂ ಅವರ ತಂಡ ಸ್ಥಳಕ್ಕೆ ತೆರಳಿ, ಬಸ್ ಬಳಿ ಟಾರ್ಚ್ ಇಟ್ಟು, “ಇಲ್ಲಿ ಯಾವುದೇ ಶಕ್ತಿ ಇದ್ದರೆ ಟಾರ್ಚ್ ಆನ್ ಮಾಡಿ” ಎಂದು ಕೇಳಿದರು. ಐದು ನಿಮಿಷಗಳಲ್ಲೇ ಯಾರೂ ಇಲ್ಲದಿದ್ದರೂ ಟಾರ್ಚ್ ಆನ್ ಆಯಿತು, ಮತ್ತು ಈ ದೃಶ್ಯ ಕ್ಯಾಮೆರಾದಲ್ಲಿ ದಾಖಲಾಗಿತು. ನಂತರ ಬಸ್ ಚಕ್ರದ ಬಳಿ ಎಲೆಕ್ಟ್ರೋಮ್ಯಾಗ್ನೆಟಿಕ್ ಗೊಂಬೆಯನ್ನು ಇಡಲಾಗಿತ್ತು. ಮಕ್ಕಳಿಗೆ ಗೊಂಬೆಗಳು ಇಷ್ಟವಿರಬಹುದೆಂಬ ಕಾರಣದಿಂದ ತನಿಖೆಯಲ್ಲಿ ಇದನ್ನು ಬಳಸಲಾಗಿತ್ತು. ಅಲ್ಪ ಸಮಯದಲ್ಲಿ ಗೊಂಬೆ ಸ್ವಯಂ ಅಲ್ಲಾಡಲು ಪ್ರಾರಂಭಿಸಿತು.
ಅದರ ಬಳಿಕ, ತಂಡದ ಮಹಿಳಾ ಸದಸ್ಯರು ಮೃತ ಮಕ್ಕಳ ಹೆಸರನ್ನು ಒಂದೊಂದಾಗಿ ಕರೆಯುತ್ತಿದ್ದಂತೆ, ಟಾರ್ಚ್ ಆನ್–ಆಫ್ ಆಗುವ ಕ್ರಿಯೆ ಹೆಚ್ಚಾಗುತ್ತಲೇ ಹೋಯಿತು, ಜೊತೆಗೆ ಗೊಂಬೆಯ ಚಲನೆ ತೀವ್ರವಾಯಿತು. ಈ ವಿಚಿತ್ರ ಘಟನೆಗಳಿಂದ ಬೆಚ್ಚಿಬಿದ್ದ ತಂಡ, ಬಸ್ನ್ನು ಆ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಶಿಫಾರಸು ಮಾಡಿತು.
ಇಷ್ಟೇ ಅಲ್ಲ, ಅಪಘಾತ ನಡೆದ ಸ್ಥಳದಲ್ಲೂ ಗ್ರಾಮಸ್ಥರು ಅಸಾಮಾನ್ಯ ಅನುಭವಗಳನ್ನು ವರದಿ ಮಾಡಿದ್ದು, ಶಾಂತಿಗಾಗಿ ವಿಶೇಷ ಹೋಮ ಮತ್ತು ಯಜ್ಞಗಳನ್ನು ನೆರವೇರಿಸಿದರು. ಡಾ. ರಾಹುಲ್ ಕುಮಾರ್ ಅವರ ಮಾತಿನಲ್ಲಿ, “ಈ ಘಟನೆ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅತೀಂದ್ರಿಯ ಅನುಭವಗಳಲ್ಲಿ ಒಂದು” ಎಂದು ಹೇಳಿದ್ದಾರೆ.