
ಕಳಸ: ಕಳಸ ರೋಟರಿ ಕ್ಲಬ್ ರಜತ ಮಹೋತ್ಸವ ಅಂಗವಾಗಿ ಕಲಶೇಶ್ವರ ದೇವಸ್ಥಾನದ ಈಶ್ವರ ಕಲಾ ಮಂದಿರಕ್ಕೆ ಛಾವಣಿ ನಿರ್ಮಿಸಿಕೊಡಲಾಯಿತು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅವರು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಛಾವಣಿ ಉದ್ಘಾಟಿಸಿ ಮಾತನಾಡಿ, ಕಳಸ ರೋಟರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಪ್ರತಿ ಅಧ್ಯಕ್ಷರೂ ಸೇವೆಯೇ ಧ್ಯೇಯ ಎನ್ನುವಂತೆ ಕರ್ತವ್ಯ ನಿರ್ವಹಿಸಿ ಕಳಸಕ್ಕೆ ಶಾಶ್ವತ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ರಜತ ಮಹೋತ್ಸವ ಸಂದರ್ಭದಲ್ಲಿ ಕಳಸದ ಈಶ್ವರ ಮಂದಿರಕ್ಕೆ ಮೇಲ್ಛಾವಣಿ ನಿರ್ಮಿಸಿರುವುದು ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ನಾಟಿ ವೈದ್ಯ ಕಾರಕ್ಕಿ ಗೋವಿಂದ ಗೌಡ ಹಾಗೂ ಜೆಇಇ ಮೆನ್ಸ್ ಪರೀಕ್ಷೆಯಲ್ಲಿ ದೇಶಕ್ಕೆ ೩೪ನೇ ಸ್ಥಾನ ಪಡೆದ ಕೆಪಿ ಪೂಜಿತ್ ರವರನ್ನು ಗೌರವಿಸಲಾಯಿತು. ಜಾಂಬ್ಲೆ ಸರ್ಕಾರಿ ಶಾಲೆಗೆ ಟಿವಿ ನೀಡಲಾಯಿತು.
ಕಳಸ ಸಹಸಿಲ್ದಾರ್ ಯು.ಎಸ್ ಕಾವ್ಯ ಮಾತನಾಡಿ, ರಾಜಕಾರಣಿಗಳು, ಅಧಿಕಾರಿಗಳು, ಮುಖಂಡರು ಮಾಡಲಾಗದ ಕೆಲಸವನ್ನು ರೋಟರಿಯಂತಹ ಸಂಸ್ಥೆಗಳು ಮಾಡುತ್ತಿವೆ ಎಂದರು. ಕಲಶೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮತಿ ಅಧ್ಯಕ್ಷ ಟಿ.ವಿ ವೆಂಕಟಸುಬ್ಬಯ್ಯ, ರೋಟರಿ ಕಾರ್ಯದರ್ಶಿ ಪಿ.ಎ ಕುಮಾರಸ್ವಾಮಿ, ರಾಜಗೋಪಾಲ ಜೋಷಿ ಇತರರಿದ್ದರು.