
ಕಳಸ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನ ಸುತ್ತ-ಮುತ್ತ ಧಾರಾಕಾರ ಮಳೆಯಿಂದಾಗಿ ಟೀ ಎಸ್ಟೇಟ್ಗೆ ನೀರು ನುಗ್ಗಿದೆ. ಈ ಘಟನೆಯು ಕಳಸ ತಾಲ್ಲೂಕಿನ ಕೆಳಗೂರು ಗ್ರಾಮದಲ್ಲ ಘಟನೆ ನಡೆದಿದೆ. ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಂಗಾಲಾಗಿದ್ದು, ಬೆಳಗ್ಗೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಮಲೆನಾಡಿಗರ ಜನ ಜೀವನ ಹೈರಾಣಾಗಿದೆ. ಎಡಬಿಡದೇ ಸುರಿಯುತ್ತಿರೋ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಇಡೀ ವರ್ಷ ಮಳೆಯಾಗಿ ನೆಲಕ್ಕುದುರಿರೋ ಅರ್ಧಕರ್ಧ ಕಾಫಿ.