
ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹಿರೇಬೈಲು ಗ್ರಾಮದಲ್ಲಿ ಎಂ.ಬಿ.ಬಿ.ಎಸ್ ಡಾಕ್ಟರ್ ಎಂದು ಹೇಳಿ ವಂಚನೆ ನಡೆದಿದ್ದು. ಸ್ಪಂದನ ಕ್ಲೀನಿಕ್ ಹೆಸರಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯ.
ಸ್ಥಳೀಯರಿಗೆ ಅನುಮಾನ ಬಂದ ಕಾರಣ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಮಾಹಿತಿ ಮೇರೆಗೆ ಮೂಡಿಗೆರೆ ವೈದ್ಯಾಧಿಕಾರಿ, ಪೋಲಿಸ್ ಹಾಗೂ ಪಿಡಿಓ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿದ್ದು, ದಾಖಲೆ ಪರಿಶೀಲಿಸಿದಾಗ ನಕಲಿ ವೈದ್ಯನ ಮುಖವಾಡ ಬಯಲಾಗಿದ್ದು. ಸ್ಪಂದನ ಕ್ಲಿನಿಕ್ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ ಎನ್ನಲಾಗಿದೆ.