
ಕಳಸ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಯೊಬ್ಬರು ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು. ಹೊರನಾಡು ಗ್ರಾಮದ ರವಿ ಮೃತ ದುರ್ದೈವಿ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರವಿಯನ್ನು ಆಸ್ಪತ್ರೆಗೆ ಕರೆತಂದಿದ್ದು, ಈ ವೇಳೆ ವೈದ್ಯರಿಲ್ಲವೆಂದು ಸಿಬ್ಬಂಧಿಗಳು ತಿಳಿಸಿದ್ದು. ಆ ವ್ಯಕ್ತಿಯು ಆಸ್ಪತ್ರೆಯಲ್ಲಿಯೇ ಸಾವಿಗೀಡಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲೂ ಕೂಡು ವೈದ್ಯರಿಲ್ಲದ ಕಾರಣ ಮಧ್ಯಾಹ್ನದ ತನಕ ಕಾದರೂ ಕೂಡ ಯಾವುದೇ ಪ್ರಯೋಜವಾಗದಿದ್ದಕ್ಕೆ ಕೊನೆಗೆ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಹೆರಿಗೆ, ಯಾವುದೇ ರೀತಿಯ ಅನಾರೋಗ್ಯವಾದರೂ ಮತ್ತೊಂದು ತಾಲ್ಲೂಕಿಗೆ ಚಿಕಿತ್ಸೆ ಪಡೆಯಲು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಶಾಸಕಿ ನಯನ ಮೋಟಮ್ಮ ಗಮನಕ್ಕೆ ಬಂದರೂ ಕೂಡ ಯಾವುದೇ ರೀತಿಯ ಪ್ರಯೋಜವಾಗಿಲ್ಲ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ. ಖಾಯಂ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ.