
ಬೆಳಗಾವಿ: ಕಾಂಗ್ರೆಸ್ನ ಮಾಜಿ ಶಾಸಕರಾದ ಕಾಕ ಸಾಹೇಬ್ ಪಾಟೀಲ್ ರವರು ಕೆಇಎಲ್ ಆಸ್ಪತ್ರೆ ಬೆಳಗಾವಿಯಲ್ಲಿ ಮದ್ಯರಾತ್ರಿ ೨ ಘಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಬಹುದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು,೭೦ನೇ ವಯಸ್ಸಿಗೆ ಮರಣ ಹೊಂದಿದ್ದಾರೆ. ರಾಜ್ಯ ಕಾಂಗ್ರೆಸ್ನ ಹಿರಿಯ ರಾಜಕಾರಣಿಯ ನಿಧನದ ಸುದ್ದಿ ತಿಳಿದು ಹಲವು ರಾಜಕೀಯ ಸ್ನೇಹಿತರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.ಕುಟುಂಬದವರಿಗೆ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತಾಪ ಸೂಚಿಸಿದ್ದಾರೆ.