
ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ಹೊಡೆದು ಕೊಂದು ಹಾಕಿದ ಘಟನೆ ನಡೆದಿದೆ. ಕುಮಾರ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಧು ಕೊಲೆ ಆರೋಪಿಯೆಂದು ತಿಳಿದು ಬಂದಿದೆ. ತೋಟದಲ್ಲಿ ಬಿದ್ದಿದ್ದ ತೆಂಗಿನ ಕಾಯಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಕುಮಾರ್, ಈ ಹಿಂದೆ ಸಾಕಷ್ಟು ಬಾರಿ ಕುಮಾರ್ಗೆ ಮಧು ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ನಿನ್ನೆ ಕೂಡಾ ತೆಂಗಿನಕಾಯಿ ತೆಗೆದುಕೊಂಡು ಹೋಗುವಾಗ ಗಲಾಟೆಯಾಗಿತ್ತು, ತೋಟದ ಮಾಲಿಕ ಮಧುಗೆ ಅವ್ಯಾಚ ಶಬ್ದಗಳಿಂದ ಕುಮಾರ್ ನಿಂದಿಸಿದ್ದರಿಂದ ಆಕ್ರೋಶಗೊಂಡು ಗುದ್ದಲಿಯಿಂದ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಕುಮಾರ್ ಮಧ್ಯ ಸೇವಿಸಿ ಊಟ-ತಿಂಡಿ ಮಾಡಿರದ ಕಾರಣ ನಿತ್ರಾಣಗೊಂಡು ಅಲ್ಲಿಯೇ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಕುಮಾರ್ನನ್ನು ಆಸ್ಪ್ರತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ಕುಮಾರ್ ಸಾವನಪ್ಪಿದ್ದಾನೆ. ಸಖರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಮಧುವನ್ನು ಸಖರಾಯಪಟ್ಟಣ ಪೋಲಿಸರು ಬಂಧಿಸಿದ್ದಾರೆ.