
ಕಡೂರು: ಹೆಚ್.ಎಮ್ ಪ್ರಶಾಂತ್ ತಾಲ್ಲೂಕು ಮತಿಘಟ್ಟದ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಆಗಿದ್ದು. ಪ್ರಶಾಂತ್ ಲಂಚ ಪಡೆಯುವ ಸಂದರ್ಭದಲ್ಲಿ ಚಿಕ್ಕಮಗಳೂರು ಲೋಕಾಯುಕ್ತ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಗುತ್ತಿಗೆದಾರ ದೇವರಾಜ್ ಎಂಬುವವರಿಗೆ ಗಂಗಾ ಕಲ್ಯಾಣ ಯೋಜನೆಗೆ ಸಂಪರ್ಕ ಕಲ್ಪಿಸಲು 9,000 ಲಂಚಕ್ಕೆ ಬೇಡಿಕೆ ಇಟ್ಟು, ಇಂದು ಮುಂಜಾನೆ 9,000 ಲಂಚದ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿ ಪ್ರಶಾಂತ್ನನ್ನು ಬಂಧಿಸಿದ್ದಾರೆ.