
ಕಡೂರು: ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಭಾರೀ ಮಳೆಗೆ ಕೋಡಿ ಬಿದ್ದ ಎರಡು ಬೃಹತ್ ಕೆರೆಗಳು. 2036 ಎಕರೆಯ ಅಯ್ಯನಕೆರೆ ಹಾಗೂ 843 ಎಕರೆಯ ಮದಗದ ಕೆರೆ ತುಂಬಿ ಕೋಡಿ ಬಿದ್ದಿದೆ. ಜಾನಪದ ಸಾಹಿತ್ಯಕ್ಕೆ ಸಾಕ್ಷಿಯಾಗಿರೋ ಮದಗದ ಕೆರೆಯು, ನೋಡಲು ಸಮುದ್ರದಂತೆ ಭಾಸವಾಗೋ ಎರಡು ಬೃಹತ್ ಕೆರೆಗಳು.
ಅಯ್ಯನಕೆರೆಯು ೩೬ ಅಡಿ ಆಳ 2036 ಎಕರೆ ವಿಸ್ತೀರ್ಣವನ್ನು ಹೊಂದಿದೆ ಹಾಗೂ ಮದಗದ ಕೆರೆಯು60 ಅಡಿ ಆಳ 843 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಏಳು ಗುಡ್ಡಗಳ ಮಧ್ಯೆ ಸಮುದ್ರದಂತೆ ಕಾಣೋ ಅಯ್ಯನಕೆರೆ ಕಣ್ಮನ ಸೆಳೆಯುತ್ತಿದೆ. ಸುತ್ತಲೂ ಮುಗಿಲೆತ್ತರದ ಬೆಟ್ಟ-ಗುಡ್ಡಗಳು ಮಧ್ಯದಲ್ಲಿರೋ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಕೆರೆಗಳು. ಪಶ್ಚಿಮ ಘಟ್ಟಗಳ ಸಾಲಲ್ಲಿ ನಿರಂತರ ಮಳೆ ಹಿನ್ನಲೆಯಲ್ಲಿ ಕೆರೆಗೆ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ಸಾಮನ್ಯವಾಗಿ ಆಗಸ್ಟ್ ಮಧ್ಯದಲ್ಲಿ ಕೋಡಿ ಬೀಳ್ತಿದ್ದ ಎರಡು ಕೆರೆಗಳು ಈ ಬಾರಿ ಜುಲೈ ಅಂತ್ಯದಲ್ಲೇ ಕೋಡಿ ಬಿದ್ದಿದೆ. ಈ ಕೆರೆ ತುಂಬಿದ್ರೆ ಕಡೂರು ತಾಲ್ಲೂಕಿನ ನೀರಿನ ಬವಣೆ ತಪ್ಪಲಿದೆ. ಕೋಡಿ ಬಿದ್ದು ಮಾರಿ ಕಣಿವೆ ಡ್ಯಾಂ ಸೇರುವ ನೀರು ಕೆರೆ ತಪ್ಪಲಿನ34 ಹಳ್ಳಿಯ ಜನ-ಜಾನುವಾರುಗಳಿಗೆ ಈ ನೀರೇ ಜೀವಜಲವಾಗಿದೆ. ಕೆರೆಯಲ್ಲಿ ನೀರು ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.