
2025 ಜುಲೈ ತಿಂಗಳು ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ. ಇದು ವಿಶೇಷ ಮಾಸ. 29-07-2025ರಂದು ನಾಗರ ಪಂಚಮಿ ಇದೆ. 01-07-2025ರಿಂದ 31-07-2025ರವರೆ ಒಟ್ಟಾರೆ ಗ್ರಹಗಳ ಸಂಚಾರ ಹನ್ನೆರಡು ರಾಶಿಗಳ ಆರ್ಥಿಕ, ವೃತ್ತಿ, ಕೌಟುಂಬಿಕ, ಹಣಕಾಸಿನ, ಸಮಸ್ಯೆ, ಪ್ರೀತಿ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂದು ತಿಳಿಯೋಣ ಬನ್ನಿ.
ಮೇಷರಾಶಿ: ಸಾಡೆಸಾತಿ ಶುರುವಾಗಿರುವುದರಿಂದ ಎಲ್ಲಾ ಕೆಲಸಗಳು ನಿಧಾನ, ಪ್ರಗತಿ ಕಡಿಮೆ, ಮೂರನೆ ಮನೆಯ ಗುರು ಸಹ ಅಲ್ಪ ಫಲವನ್ನು ನೀಡುತ್ತಾನೆ. ಆದರೆ ರಾಹು 11 ನೇ ಮನೆ ಲಾಭ ಸ್ಥಾನಕ್ಕೆ ಪ್ರವೇಶವಾಗಿರುವುದರಿಂದ ಹಣಕಾಸಿನ ಹರಿವು ಉತ್ತಮವಾಗಿದೆ. ಯಾವುದೋ ಊಹಿಸಿದ ಮೂಲಗಳಿಂದ ಹಣ ಸಹಾಯ ಒದಗಿ ಬರುತ್ತದೆ. ಹೊಸ ಪ್ರಾಜೆಕ್ಟ್ಗಳು ಸಿಗುತ್ತವೆ. ಶೇರ್ಸ್ನಲ್ಲಿ ಹಣ ಹೂಡಿದ್ದರೆ ಲಾಭ ಬರುತ್ತದೆ. ಸರ್ಕಾರಿ ಕೆಲಸಗಳು ಹಗುರವಾಗುತ್ತದೆ. ಖರ್ಚುಗಳು ಹೆಚ್ಚಾಗುವುದು. ಆದಷ್ಟು ಯೋಚಿಸಿ ವಿವೇಚನೆಯಿಂದ ಮುಂದುವರೆಯಿರಿ. ಕೊಂಚ ಸುಖ ನೆಮ್ಮದಿಯ ದಿನಗಳನ್ನು ಅನುಭವಿಸುವಿರಿ. ಸಾಡೆಸಾತ್ ಪರಿಹಾರಕ್ಕಾಗಿ ಹನುಮಂತನ ಪ್ರಾರ್ಥನೆ ಮಾಡಿ. ಹನುಮಾನ್ ಚಾಲೀಸ್ ಓದಿ. ಯಾವುದೇ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ ಮಂದುವರೆಯಿರಿ.
ವೃಷಭರಾಶಿ: ಈಗ ನಿಮಗೆ ಗುರುಬಲ ಶನಿಬಲ ಎರಡೂ ಇದೆ. ಅಭಿವೃದ್ಧಿ ಇದೆ. ಶನಿ ಲಾಭಸ್ಥಾನದಲ್ಲಿದ್ದು ಧನಲಾಭ ಕಾರ್ಯಸಫಲತೆ ಕೊಡುತ್ತಾನೆ.ಪ್ರಗತಿ ಚನ್ನಾಗಿರುತ್ತದೆ. ಈ ತಿಂಗಳು ಶುಕ್ರ ನಿಮ್ಮ ರಾಶಿಯಲ್ಲಿ ಸಂಚರಿಸುತ್ತಾ ನಿಮಗೆ ಸುಖಭಾಗ್ಯಗಳನ್ನು ಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಸಂಭಂದಗಳು ಬರುತ್ತವೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ನಿಮಗೆ ದನ ಲಾಭ, ಕಾರ್ಯಸಿದ್ಧಿ, ಒಳ್ಳೆಯ ಹಿತೈಷಿಗಳ ಸಹವಾಸ, ಕೌಟುಂಬಿಕ ಸೌಖ್ಯ ಮೊದಲಾದ ಶುಭ ಸಂಗತಿಗಳು ನಿಮ್ಮದಾಗಲಿದೆ. ಕಾರ್ಯಸಿದ್ಧಿ ಕಾಣುವಿರಿ.
ಮಿಥುನ ರಾಶಿ: ಶುಭ ಫಲಗಳನ್ನು ಪಡೆಯಲು ನೀವಿನ್ನು ಕಾಯಬೇಕು. ವೃತ್ತಿಯಲ್ಲಿ ವ್ಯಾಪಾರದಲ್ಲಿ ಲಾಭಗಳು ಒಳ್ಳೆಯ ಸಂಗತಿಗಳು ಜರುಗುತ್ತವೆ. ಧನಲಾಭ ಚನ್ನಾಗಿದೆ. ಯಾವಗ್ರಹವೂ ಕೆಟ್ಟಸ್ಥಾನದಲ್ಲಿ ಇಲ್ಲ. ಆದರೆ ಕೇತು ಮೂರನೆ ಮನೆಯಲ್ಲಿ ನಿಮಗೆ ಪರಾಕ್ರಮ, ಶಕ್ತಿ ಹಾಗೂ ಧನಲಾಭವನ್ನು ಕೊಡುತ್ತಾನೆ. ವಾಹನ ಯೋಗವಿದೆ. ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಶುಭಕಾರ್ಯಕ್ಕೆ ಖರ್ಚುಮಾಡುತ್ತೀರಿ, ಅಲೆದಾಟ, ದೈಹಿಕ ಶ್ರಮ ಕಡಿಮೆಯಾಗುತ್ತದೆ. ಹೂಡಿಕೆಗಳಲ್ಲಿ ಲಾಭ ಸಿಗುತ್ತದೆ. ಶತ್ರುಗಳು ದೂರವಾಗಿ, ಆರೋಗ್ಯ ಸುಧಾರಿಸುತ್ತದೆ.
ಕಟಕ ರಾಶಿ: ಅಷ್ಟಮ ಶನಿಯಿಂದ ಮುಕ್ತಿ. ಧರ್ಮದಲ್ಲಿ ಮನಸ್ಸು ನೀಡುತ್ತಾನೆ. ಧರ್ಮಕಾರ್ಯಗಳನ್ನು ಮಾಡುವುದು ಒಳ್ಳೆಯದು. ಊಟ ತಿಂಡಿ ವಿಷಯದಲ್ಲಿ ಅಪಥ್ಯವಾಗದಂತೆ ಎಚ್ಚರಿಕೆ ವಹಿಸಿ.ಕೌಟುಂಬಿಕವಾಗಿ ಕೊಂಚ ಅಶಾಂತಿ ಇರುತ್ತದೆ. ಈ ಮಾಸ ನಿಮಗೆ ಮಿಶ್ರ ಫಲ.ಯಾರೊಡನೆಯು ವಾದವಿವಾದಕ್ಕೆ ಹೋಗಬೇಡಿ. ಮನೆ ದೇವರ ಪ್ರಾರ್ಥನೆ ಮಾಡಿ.
ಸಿಂಹ ರಾಶಿ: ಗುರುಶುಕ್ರ ಲಾಭಸ್ಥಾನದಲ್ಲಿದ್ದು ಧನಲಾಭ ಚೆನ್ನಾಗಿದೆ. ಅಷ್ಟಮಶನಿ ಪ್ರಭಾವದಿಂದ ಖರ್ಚುಗಳು ಹೆಚ್ಚು. ಕೊಂಚ ಕಿರಿಕಿರಿ ಆತಂಕದ ವಾತಾವರಣ, ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ಹರಿವಿಗೂ ಖರ್ಚಿಗೂ ತಾಳೆಯಾಗದೆ ಏರುಪೇರಿನ ಪರಿಸ್ಥಿತಿ ಎದುರಾಗಬಹುದು.ಗುರು ಲಾಭಸ್ಥಾನಕ್ಕೆ ಪ್ರವೇಶ ಮಾಡಿರುವುದರಿಂದ ಎಲ್ಲವನ್ನೂ ಸಂಭಾಳಿಸುವ ಚೈತನ್ಯ ಕೊಡುತ್ತಾನೆ. ಸಾಕಷ್ಟು ಪರಿಹಾರಗಳು ನಿಮ್ಮ ಕಣ್ಣ ಮುಂದೆ ಕಾಣಿಸುತ್ತದೆ. ಲಾಭದ ಗುರು ನಿಮಗೆ ಅನೇಕ ಭಾಗ್ಯಗಳನ್ನು ಸೌಖ್ಯಗಳನ್ನು ಕೊಡುತ್ತಾನೆ. ಜಾಗರೂಕರಾಗಿರಿ, ದೃಷ್ಟಿದೋಷ, ಉಸಿರಾಟ, ಅಲರ್ಜಿ, ಫಂಗಲ್ ಇನ್ಫಕ್ಷನ್, ಬ್ಯಕ್ಟೀರಿಯಲ್ ಇನ್ಫಕ್ಷನ್ ಬರಬಹುದು. ಕೈ ಕಾಲಿಗೆ ಪೆಟ್ಟು ಬೀಳಬಹುದು. ಸುಭ್ರಹ್ಮಣ್ಯನಿಗೆ ಹಾಲಿನ ಅಭಿಷೇಕ ಮಾಡಿಸಿ.
ಕನ್ಯಾರಾಶಿ: ರಾಹು ಆರನೇ ಮನೆಯಲ್ಲಿ ಬಹು ಲಾಭ ಕೊಡುತ್ತಾನೆ. ಧನಾಗಮನ ಉತ್ತಮವಾಗಿದೆ. ಆದರೆ ನಿಮಗೆ ಗುರುಬಲವಿಲ್ಲ. ಶನಿಬಲ ಗುರುಬಲ ಎರಡೂ ಇಲ್ಲದಿರುವುದರಿಂದ ವೈಯಕ್ತಿಕ ಬೆಳವಣಿಗೆ ಕಡಿಮೆ. ಅನಾರೋಗ್ಯ ಕಾಡಬಹುದು. ಶನಿ ಒತ್ತಡಗಳನ್ನು ಕೊಡುತ್ತಾನೆ ಹಾಗೂ ಕೋಪ,ಸಿಡುಕು, ಅಸಹನೆ ಮುಂತಾದ ಸ್ವಭಾವ ಹೆಚ್ಚು ಮಾಡುತ್ತಾನೆ. ಚರ್ಮದ ಅಲರ್ಜಿಗಳಾಗಿದ್ದರೆ ಕಡಿಮೆಯಾಗುತ್ತದೆ. ಪದಚ್ಯುತಿಯಾಗಬಹುದು. ಎಚ್ಚರಿಕೆಯಿಂದಿರಿ. ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೌಟುಂಬಿಕ ತಲ್ಲಣಗಳು ಎದುರಾಗಬಹುದು. ಹನ್ನೊಂದನೆ ಮನೆಯಲ್ಲಿ ಸೂರ್ಯ ಹಾಗೂ ಬುಧ ಇದ್ದು ನಿಮಗೆ ಕೊಂಚ ಮಟ್ಟಿನ ಆರಾಮ ಸಿಗುತ್ತದೆ.ಸುಭ್ರಹ್ಮಣ್ಯನ ಜಪ ಮಾಡಿಸಿ.
ತುಲಾ ರಾಶಿ: ಇಲ್ಲಿಯವರೆಗೆ ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಗುರು ಒಂಭತ್ತನೇ ಮನೆಗೆ ಪ್ರವೇಶ ಮಾಡಿರುವುದರಿಂದ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಅನೇಕ ಅವಕಾಶಗಳು ನಿಮ್ಮ ಮುಂದೆ ಬರುತ್ತದೆ. ನಿಂತು ಹೋಗಿದ್ದ ಕೆಲಸಗಳೆಲ್ಲ ಸರಸರನೆ ಮುಂದುವರೆಯುತ್ತದೆ. ವೃತ್ತಿಯಲ್ಲಿ ಮಹತ್ತರ ಬದಲಾವಣೆ ಇದೆ. ಪದವಿ ಭಡ್ತಿ ಅಧಿಕಾರ ಪ್ರಾಪ್ತಿ ಇದೆ. ಬಹಳ ದಿನಗಳಿಂದ ಕಂಗೆಡಿಸುತ್ತಿದ್ದ ಸಮಸ್ಯೆಗಳು ಈಗ ಪರಿಹಾರ ಕಾಣುತ್ತದೆ. ಶನಿ ಕೂಡ ಪಂಚಮದಿಂದ ಷಷ್ಠಕ್ಕೆ ಬಂದಿದ್ದಾನೆ. ಆರನೆ ಮನೆ ಶನಿ ಬಹಳ ಉಪಕಾರಿ. ಹಣಕಾಸು ಸ್ಥಿತಿ ಸುಗಮವಾಗುತ್ತದೆ. ನಿಮ್ಮ ಸಮಸ್ಯೆಗಳು ಶೀಘ್ರ ಪರಿಹಾರ ಕಾಣುತ್ತದೆ. ಎಲ್ಲಾ ವಿಷಯಗಳಲ್ಲೂ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಬದಲಾಯಿಸುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ನೌಕರಿ ದೊರೆಯುವ ಅವಕಾಶವಿದೆ. ವಿದೇಶ ಪ್ರವಾಸ, ಪ್ರಯಾಣಕ್ಕೆ ಅನುಕೂಲಗಳು ಒದಗಿ ಬರುತ್ತವೆ.
ವೃಶ್ಚಿಕ ರಾಶಿ: ಆರೋಗ್ಯದಲ್ಲಿ ಕೊಂಚ ವ್ಯತ್ಯಾಸಗಳು ಕಾಣಬಹುದು. ಪಂಚಮ ಶನಿ ಪ್ರಾರಂಭವಾಗಿದೆ. ಒತ್ತಡಗಳು ಇರುತ್ತದೆ. ನಿಮ್ಮ ತಪ್ಪಿಲ್ಲದಿದ್ದರೂ ತಲೆ ತಗ್ಗಿಸುವ ಸಂಭವಗಳು ಬರಬಹುದು. ಪ್ರವಾಹಕ್ಕೆ ಎದುರಾಗಿ ಈಜುವ ಪರಿಸ್ಥಿತಿ ಬರಬಹುದು. ಹಣ ಕಾಸಿನ ಸ್ಥಿತಿ ಕೊಂಚ ಇಳಿಯಬಹುದು. ನಿಮ್ಮ ಯೋಜನೆಗಳು ನಿಮ್ಮ ಅನಿಸಿಕೆಯಂತೆ ನಡೆಯದೇ ಇರಬಹುದು. ವಿಳಂಬ ವಾಗಬಹುದು. ಕಾರ್ಯಕ್ಷೇತ್ರದಲ್ಲಿ ನಿಧಾನ ಪ್ರಗತಿ. ಒಳ್ಳೆಯ ಅವಕಾಶಗಳು ಮುಂದೆ ಮುಂದೆ ಹೋಗುತ್ತವೆ.ಕೈಗೆ ಸಿಕ್ಕಿದರೂ ಸಿಗದಂತೆ ತಪ್ಪಿಸಿಕೊಳ್ಳುತ್ತದೆ. ನಮಗೆ ಕಾಣದಂತೆ ಎಲ್ಲೋ ಹೊಡೆತ ಬೀಳುತ್ತದೆ. ಸಂಭಂದಗಳಲ್ಲಿ ಕಿರಿಕಿರಿ, ಸಾಕಷ್ಟು ಖರ್ಚುಗಳು ಶನಿಸವಾಲನ್ನು ಒಡುತ್ತಾನೆ. ಹನುಮಾನ್ ಚಾಲೀಸ್ ಪಠಿಸಿ.
ಧನಸ್ಸು ರಾಶಿ: ಸಂಪೂರ್ಣ ಗುರು ಬಲವಿದೆ. ಈಗ ಪರಿಸ್ಥಿತಿ ನಿಮ್ಮ ಹಿಡಿತಕ್ಕೆ ಬರುತ್ತಿದೆ. ಗುರುಬಲ ಇರುವುದರಿಂದ ನೀವು ಯಾವುದನ್ನು ಬೆಟ್ಟದ ಹಾಗಿರುವ ಕಷ್ಟ ಎಂದು ತಿಳಿದಿದ್ದೀರೋ ಅದು ಹತ್ತಿಯಂತೆ ಹಗುರವಾಗಿ ಹಾರಿ ಹೋಗುತ್ತದೆ. ಹಣ ಕಾಸಿನ ಸ್ಥಿತಿ ಸುಗಮವಾಗುತ್ತದೆ ಹಾಗೂ ಧೈರ್ಯ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಸಂಗಾತಿಯಿಂದ ಸಹಾಯ ಬೆಂಬಲ ಪಡೆಯುತ್ತೀರಿ. ವಿದೇಶ ಯಾತ್ರೆ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಸಿಗುತ್ತದೆ. ಕೋರ್ಟು ವ್ಯಾಜ್ಯಗಳಲ್ಲಿ ಜಯ ಸಿಗುತ್ತದೆ.
ಮಕರ ರಾಶಿ: ಜೀವನದಲ್ಲಿ ಒಂದು ಮಹತ್ತರ ಬದಲಾವಣೆಯನ್ನು ತರುತ್ತದೆ. ಕೀರ್ತಿ, ಯಶಸ್ಸು ನಿಮ್ಮ ಹೆಗಲೇರಲಿವೆ. ಹಣ ಕಾಸಿನ ಸ್ಥಿತಿ ಸುಗಮವಾಗಲಿದೆ. ನಿಮ್ಮ ವಿರೋಧಿಗಳು ಕೂಡ ಈಗ ಸ್ನೇಹ ಹಸ್ತ ಚಾಚುತ್ತಾರೆ. ಅಪರಿಚಿತರು ಕೂಡು ಸಹಾಯ ಮಾಡುವ ಕಾಲ.ದೇವರ ಅನುಗ್ರಹ ದೊರೆತು ಎಲ್ಲ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ. ಹೊಸ ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುಬಲ ಇಲ್ಲದೆ ನಿಧಾನವಾಗುತ್ತದೆ. ಆರೋಗ್ಯ ಜೋಪಾನ.
ಕುಂಭರಾಶಿ: ಗರುವಿನ ಐದನೇ ಮನೆ ಪ್ರವೇಶ ವೈಯಕ್ತಿಕ ಬೆಳವಣಿಗೆಗೆ ಸಹಾಯಕವಾಗಲಿದೆ. ಇದುವರೆಗೂ ವಿನಾಕಾರಣ ನೋವು ಅಪಮಾನಗಳನ್ನು ಅನುಭವಿಸಿದ್ದೀರಿ. ಯಾವ ಕೆಲಸಕ್ಕೆ ಕೈ ಹಾಕಿದರೂ ನಿಂತಲ್ಲೆ ನಿಲ್ಲುತ್ತಿತ್ತು. ಕೋರ್ಟು ಕಛೇರಿ ಅಲೆದಾಟ ಧನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂತ ಘಟನೆಗಳಿಂದ ನೊಂದಿದ್ದೀರಿ.ಸಂಪೂರ್ಣಗುರು ಭಲ ಇದೇ ಕಾರಣದಿಂದ ಅನೇಕ ಶುಭಫಲಗಳು ದೊರೆಯಲಿದೆ. ಸಾಡೇಸಾತಿಯ ಕೊನೆಯ ಹಂತದಲ್ಲಿದ್ದೀರಿ ಈಗ ಅಷ್ಟೇನು ನಿಮಗೆ ತ್ರಾಸದಾಯಕವಲ್ಲ ಆದರೂ ತಕ್ಕ ಮಟ್ಟಿನ ಎಚ್ಚರಿಕೆಯಲ್ಲಿರಿ. ಒತ್ತಡಗಳಿಂದ ದೂರವಾಗುತ್ತೀರಿ. ಕತ್ತಿನ ಮೇಲೆ ತೂಗುತ್ತಿರಿರುವ ಕತ್ತಿಯಿಂದ ತಪ್ಪಿಸಿಕೊಳ್ಳುತ್ತೀರಿ. ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಕಾಣಲಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಿಷವಸ್ತುಗಳಿಂದ ಅಪಾಯವಾಗಬಹುದು.
ಮೀನರಾಶಿ: ಸಾಡೆಸಾತಿಯ ಎರಡನೇ ಭಾಗದಲ್ಲಿದ್ದೀರಿ. ಹಾಗಾಗಿ ಹೆಚ್ಚಿಗೆ ಏನೂ ನಿರೀಕ್ಷೆಯಿಲ್ಲ. ಇದ್ದಂತೆ ನಡೆದುಕೊಂಡು ಹೋದರೆ ಅದೇ ಅದೃಷ್ಟ. ಆರೋಗ್ಯದಲ್ಲಿ ಚೇತರಿಕೆ. ಹಣಕಾಸು ಸ್ಥಿತಿಯಲ್ಲಿ ಸುಧಾರಣೆ. ವೈರಲ್ ಇನ್ಫೆಕ್ಷನ್, ಉಸಿರಾಟ ತೊಂದರೆ ಅಲರ್ಜಿ ಇವೆಲ್ಲ ನಿವಾರಣೆ ಆಗುತ್ತದೆ. ಕೆಲಸು ಶುಭ ಸಂಗತಿಗಳಿಂದ ನಿಮಗೆ ಸಂತೋಷ ಸಿಗುತ್ತದೆ. ಕೌಟುಂಬಿಕ ನಿರ್ವಹಣೆ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇದೆ. ಯಾವುದೇ ಕೆಲಸಕ್ಕೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ, ಸಹನೆ ಸಮಾಧಾನ ನಿಮ್ಮ ಮಂತ್ರವಾಗಿರಲಿ.