
ಶೃಂಗೇರಿ: ಶ್ರಿ ಶಾರದಾಂಬೆ ಮಡಿಲು ತುಂಗೆಯ ಒಡಲಿನಲ್ಲಿರುವ ಜೆಸೀಸ್ ಶಾಲೆ ಸಚ್ಚಿದಾನಾಂದಪುರ ಶೃಂಗೇರಿಯ ವಾರ್ಷಿಕೊತ್ಸವ ಸಮಾರಂಭ ಶೃಂಗೇರಿಯ ಗೌರಿಶಂಕರ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಜೆಸೀಸ್ ಸ್ಕೂಲ್ ಮ್ಯಾನೇಜ್ ಮೆಂಟ್ ಅಧ್ಯಕ್ಷರಾದ ಗಜಾನನ ಎಮ್.ಭಟ್ ಉದ್ಘಾಟಿಸಿದರು. ಸಮಾರಂಭದಲ್ಲಿ ಶ್ರೀಯುತ ಸತೀಶ್-ಆಡಳಿತಾಧಿಕಾರಿ ಕಛೇರಿ ಮುಖ್ಯಸ್ಥರು-ಶ್ರಿ ಶಾರದಾಪೀಠ ಶೃಂಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಜಿ ರಾಘವೇಂದ್ರ, ರಂಗಕರ್ಮಿ ರಮೇಶ್ ಬೇಗಾರ್, ಜೆಸೀಸ್ ಸ್ಕೂಲ್ ಮ್ಯಾನೇಜ್ ಮೆಂಟ್ ಉಪಾಧ್ಯಕ್ಷರಾದ ಡಾ. ಹೆಚ್.ಜಿ ಲಕ್ಷ್ಮಿನಾರಾಯಣ್ ಖಚಾಂಚಿ ಹೆಚ್.ಎನ್ ವಿಶ್ವೇಶ್ವರ್, ಜೇಸೀಸ್ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಇಂದಿರಾ, ಸಹಶಿಕ್ಷಕರು, ಶ್ರೀ ಶಾರದಾ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ಸಿಬ್ಬಂದಿಗಳು. ಜೆಸೀಸ್ ಸ್ಕೂಲ್ ಮ್ಯಾನೇಜ್ ಮೆಂಟ್ ಕಮಿಟಿ ಸದಸ್ಯರು ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಜಿ ರಾಘವೇಂದ್ರರವರು ಮಾತನಾಡಿ 10ನೇ ತರಗತಿಯಲ್ಲಿ ಶಾಲೆ ನಿರಂತರವಾಗಿ ಉತ್ತಮ ಫಲಿತಾಂಶವನ್ನು ನಿಡುತ್ತಿದ್ದು, ಶಾಲೆ ಎಲ್ಲಾ ತರಹದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದು ಅತ್ಯಂತ ಸಂತೋಷಕರ ವಿಷಯವಾಗಿದೆ ಎಂದರು.ಹಾಗೆ ರಂಗಭೂಮಿ-ಕಿರುತೆರೆ ಹಾಗೂ ಚಲನಚಿತ್ರ ನಿರ್ದೇಶಕ ರಮೇಶ್ ಬೇಗಾರ್ ಮಾತನಾಡಿ ಜೇಸೀಸ್ ಶಾಲೆಯ ಸಮೃದ್ಧಿಯನ್ನು ನಾನು ನೇರವಾಗಿ ನೋಡಿದ್ದೇನೆ. ಬದುಕಿಗಾಗಿ ಶಿಷ್ಟಾಚಾರ ಎಂಬುದು ಬಹುಮುಖ್ಯವಾದುದು ಅದನ್ನು ಈ ಶಿಕ್ಷಣ ಸಂಸ್ಥೆ ಕಲಿಸುತ್ತದೆ ಜೇಸೀಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯ ಜೊತೆಗೆ ಆತ್ಮವಿಶ್ವಾಸ ಗಳಿಸುವುದನ್ನೂ ಕಲಿಸುತ್ತದೆ ಎಂದರು.
ಶಾಲಾ ಮಕ್ಕಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣಗೊಂಡಿತು. ಇದೇ ವೇಳೆ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಶಾಲೆ ಹಾಗೂ ಊರಿಗೆ ತಮ್ಮ ಪ್ರತಿಭೆಯಿಂದ ಕೀರ್ತಿ ತಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಕಾರ್ಯಕ್ರಮವು ಜೈಟಿವಿಯಲ್ಲಿ ನೇರಪ್ರಸಾರಗೊಂಡಿದ್ದು, ಕಾರ್ಯಕ್ರಮವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಬಹುದಾಗಿದೆ.