
ಶೃಂಗೇರಿ ಸೆ.9 : ಇಂದಿನಿಂದ ಸೆ.15 ರ ವರೆಗೆ ಪಟ್ಟಣದ ಜಿಎಸ್ ಬಿ ಸಮುದಾಯದ ಭವನದಲ್ಲಿ ಜೇಸೀ ವೀಕ್ ಕಾರ್ಯಕ್ರಮ ನಡೆಯಲಿದೆ ಎಂದು ಜೆಸಿಐ ಅಧ್ಯಕ್ಷ ಅಶೋಕ್ ತಿಳಿಸಿದ್ದಾರೆ.
ಪ್ರತಿದಿನ ಅಂಗನವಾಡಿ ಮಕ್ಕಳಿಂದ ಆರಂಭವಾಗಿ ಸಾರ್ವಜನಿಕ ಮಟ್ಟದ ನಾನಾ ಸ್ಪರ್ಧೆಗಳು ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸುಮಾರು 250 ಜನ ನಾನಾ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಂತೆ ಶ್ರಮಿಸುತ್ತಿವವರಿಗೆ ಗೌರವ ಸಮರ್ಪಣೆ ಕಾರ್ಯವು ನೆರವೇರಲಿದೆ ಎಂದು ಅಶೋಕ್ ತಿಳಿಸಿದ್ದಾರೆ. ದಿನಾಂಕ 15 ರಂದು ಸರಿಗಮಪ ಖ್ಯಾತಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಿಡಿಸಲಾಗಿದೆ.
ಈ ಸಂದರ್ಭದಲ್ಲಿ ಜೇಸಿಐ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ, ಜೇಸೀ ರಮೇಶ್,ಶ್ರೀಕಾಂತ್,ಅಭಿಷೇಕ್, ಸಚಿನ್ ಹೆಗ್ಗದ್ದೆ ಶಿವಾನಂದ್ ರಾವ್, ರಾಘವೇಂದ್ರ ಇತರರು ಉಪಸ್ಥಿತರಿದ್ದರು.