
ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ರಾಮತೀರ್ಥ ರಾಮೇಶ್ವರ ಜಾತ್ರಾ ಮಹೋತ್ಸವವು ಅತಿ ಸಂಭ್ರಮ ಸಡಗರದಿಂದ ಜರುಗಿತು.
ಐತಿಹಾಸಿಕ ರಾಮತೀರ್ಥ ಪಟ್ಟವರ್ದನ ಮಹಾರಾಜರ ಮೈದಾನದಲ್ಲಿರುವ ರಾಮೇಶ್ವರ ದೇವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರು ಸೇರಿಕೊಂಡು ಮುಂಜಾನೆ ಪಂಚಾಮೃತ ಅಭಿಷೇಕ ಮಾಡಿದರು.
ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಬಂದಂತಹ ಭಕ್ತರಿಗೆ ಅಲ್ಲಿ ಉಪಹಾರ ಪ್ರಸಾದದ ವ್ಯವಸ್ಥೆಯನ್ನು ಮಾಡಿದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಜಮಖಂಡಿ 2003-2004 ಸಾಲಿನ ಎಸ್ಎಸ್ಎಲ್ಸಿ ಗೆಳೆಯರ ಬಳಗದ ವಿದ್ಯಾರ್ಥಿಗಳಿಂದ ನಡೆಯಿತು.
ಸಾಯಂಕಾಲ 06 ಗಂಟೆಗೆ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಸಾವಿರಾರು ಭಕ್ತರು ಸೇರಿಕೊಂಡು ರಥೋತ್ಸವವನ್ನು ಅತಿ ವಿಜೃಂಭಣೆಯಿಂದ , ಸಡಗರದಿಂದ ರಥವನ್ನು ಎಳೆದು ಭಕ್ತರು ಪುನೀತರಾದರು.
ಯಾವುದೇ ಅಹಿತಕರ ಘಟನೆ ಆಗಬಾರದೆಂದು ಜಮಖಂಡಿ ಗ್ರಾಮೀಣ ಪೋಲಿಸ್ ಠಾಣೆಯ ಸಿಪಿಐ ಮಲ್ಲಪ್ಪ ಮಡ್ಡಿ ಅವರ ನೇತೃತ್ವದಲ್ಲಿ ಪೋಲಿಸರ ತಂಡ ಬಂದಾ ಬಸ್ತ್ ಮಾಡಲಾಗಿತ್ತು.