
ಜಮಖಂಡಿ: ಪ್ರವಾಹದ ಭೀತಿಯಲ್ಲಿದ್ದ ಮುತ್ತೂರ ನಡುಗುಡ್ಡೆಯ ಜನರನ್ನು ಮುತ್ತೂರ ಗ್ರಾಮಕ್ಕೆ ಸ್ಥಳಾಂತರಿಸಿದ ಜಮಖಂಡಿ ತಹಶೀಲ್ದಾರ ಅನೀಲ ಬಡಿಗೆರ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದ ಪ್ರವಾಹ ಬಂದ ನಡುಗುಡ್ಡೆಗೆ ಜಮಖಂಡಿ ತಹಶೀಲ್ದಾರ್ ಅನೀಲ್ ಬಡಿಗೆರ ಭೇಟಿ ನೀಡಿ ಅಲ್ಲಿನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿ ಕೃಷ್ಟಾ ನದಿ ನೀರಿನ ಮಟ್ಟ ದಿನೆ-ದಿನೆ ಹೆಚ್ಚಾಗುತ್ತಿದೆ. ಮುತ್ತೂರು ಗ್ರಾಮದ ನಡುಗುಡ್ಡೆಯಲ್ಲಿ 170ಎಕರೆ ಭೂಮಿ ಇದ್ದು. ನೀರು ಸುತ್ತುವರೆದು, ಮುಳುಗುವ ಹಂತದಲ್ಲಿದ್ದು ಸುಮಾರು 38 ಕುಟುಂಬಗಳು ಮತ್ತು 123 ದನಕರುಗಳು ಇದ್ದು. ಅದರಲ್ಲಿ 07 ಕುಟುಂಬಗಳು ಮತ್ತು 37 ದನಕರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಇನ್ನೂ ಹಲವು ಕುಟುಂಬಗಳು ಪಶುಗಳ ಆಹಾರ ಮೇವಿನ ಸಲುವಾಗಿ ಬರಲು ಹಿಂದೇಟು ಹಾಕಿ ಅಲ್ಲೇ ನೆಲೆ ನಿಂತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ನೋಡಲ್ ಅಧಿಕಾರಿ ಸಿದ್ದಗೀರಿ ನ್ಯಾಮಗೌಡ, ಕಂದಾಯ ನಿರೀಕ್ಷಕ ಮಂಜು ದೊಡ್ಡಮನಿ, ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ಕಬಾಡಗಿ, ಪಶು ವೈದಾಧಿಕಾರಿ ಯಲ್ಲಪ್ಪಾ ಅಥಣಿ, ಪಶುವೈದ್ಯಕೀಯ ಪರೀಕ್ಷಕರಾದ ಈಶ್ವರ ಅಸ್ಕಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತ ಕರ್ಣಕೋಟೆ, ಕಾರ್ಯದರ್ಶಿ ಶ್ರೀಶೈಲ್ ಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.