
ಜಯಪುರ: ಇತ್ತೀಚಿಗೆ 10/08/2025 ಭಾನುವಾರ ಶಿವಮೊಗ್ಗದಲ್ಲಿ ನಡೆದ 6ನೇ ಅಂತರಾಷ್ಟ್ರ ಮಟ್ಟದ ಸ್ಪರ್ಧಾಕೂಟದಲ್ಲಿ ನಮ್ಮ ಜೈಪುರ ಬಿ.ಜಿ. ಎಸ್. ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್ ಆರ್ ಆಚಾರ್ಯ ಇವರು ಭಾಗವಹಿಸಿ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದವನ್ನು ಪಡೆದುಕೊಂಡಿರುತ್ತಾರೆ. ಇವರು ಜೈಪುರ ನಿವಾಸಿಯಾದ ರಾಘವೇಂದ್ರ ಆಚಾರ್ಯ ಮತ್ತು ಸಂಗೀತ ದಂಪತಿಗಳ ಪುತ್ರರಾಗಿರುತ್ತಾರೆ. ಇವರು ಪ್ರಸಿದ್ಧ ಸಂಸ್ಥೆಯಾದ ಬುಡೋಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಮುಖ್ಯ ಶಿಕ್ಷಕರಾದ ವಾಮನ್ ಪಾಲನ್ ಹಾಗೂ ಸಹ ಶಿಕ್ಷಕ ಶ್ರೇಯಸ್ ಇವರಲ್ಲಿ ತರಬೇತಿ ಪಡೆದುಕೊಂಡಿರುತ್ತಾರೆ.