
ಚಾಮರಾಜನಗರ : ಚಾಮರಾಜನಗರದಲ್ಲಿ ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಜೈ ಹಿಂದ್ ಕಟ್ಟೆಯಲ್ಲಿ ಆಯೋಜಿಸಲಾದ ಪುಲ್ವಾಮಾ ದಾಳಿ ವೀರ ಯೋಧರ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅವರು, ದೇಶಕ್ಕಾಗಿ ಪ್ರಾಣ ತ್ಯಾಗ ಬಲಿದಾನ ಮಾಡುವ ಮೂಲಕ ಗಡಿಯಲ್ಲಿ ಸದಾ ಸಜ್ಜಾಗಿರುವ ಯೋಧರು ಹಾಗೂ ಅವರ ಕುಟುಂಬಗಳಿಗೆ ಇಡೀ ಭಾರತೀಯ ಸಮಾಜ ಸದಾಕಾಲ ಗೌರವ ಸಲ್ಲಿಸಬೇಕು ಮತ್ತು ಭಾರತ ಸರ್ಕಾರಕ್ಕೆ ನಿಷ್ಠೆ ಹಾಗೂ ಬೆಂಬಲ ನೀಡಬೇಕು ಎಂದು ಹೇಳಿದರು. ಫೆಬ್ರವರಿ 14 ಭಾರತೀಯರಿಗೆ ಕರಾಳ ದಿನವಾಗಿದ್ದು, ದೇಶಸೇವೆಯಲ್ಲಿ ತೊಡಗಿದ್ದ ನಲವತ್ತು ಸೈನಿಕರನ್ನು ದುಷ್ಟ ಭಯೋತ್ಪಾದಕರು ಹತ್ಯೆ ಮಾಡಿದ ಘಟನೆ ಅತ್ಯಂತ ದುಃಖಕರವಾಗಿದೆ ಎಂದ ಅವರು, ಭಯೋತ್ಪಾದನೆ ವಿರುದ್ಧ ಭಾರತ ಸದೃಢ ಕಾರ್ಯಯೋಜನೆ ರೂಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ನಿವೃತ್ತ ಮುಖ್ಯ ಶಿಕ್ಷಕಿ ಕೆ.ವಿ. ಶ್ರೀಮತಿ ಅವರು ಮೇಣದಬತ್ತಿ ಬೆಳಗಿಸಿ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸಿದರು ಹಾಗೂ ಯೋಧರ ಕುಟುಂಬಗಳಿಗೆ ದುಃಖವನ್ನು ತಡೆಯುವ ಶಕ್ತಿ ದೊರಕಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿ ವೀರರಿಗೆ ನಮನ ಸಲ್ಲಿಸಲಾಯಿತು ಮತ್ತು ಪ್ರತಿಷ್ಠಾನದ ಕುಸುಮ, ಗುಂಡ್ಲುಪೇಟೆ ರಮೇಶ್, ಕಾರ್ತಿಕ್ ಸಾನಿಕ್, ಶ್ರಾವ್ಯ, ಶರಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.




